Saturday, July 5, 2025
spot_imgspot_img
spot_imgspot_img

ಕಾಸರಗೋಡು: ಹಾಡುಹಗಲೇ ಮನೆಗೆ ನುಗ್ಗಿ 13 ಪವನ್ ಚಿನ್ನಾಭರಣ ದೋಚಿದ ಖದೀಮರು

- Advertisement -
- Advertisement -

ಕಾಸರಗೋಡು: ಹಾಡುಹಗಲೇ ಮನೆಗೆ ನುಗ್ಗಿದ ಕಳ್ಳರು 13 ಪವನ್ ಚಿನ್ನಾಭರಣ ಕಳವುಗೈದ ಘಟನೆ ಬುಧವಾರ ಕುಂಬಳೆ ಸಮೀಪದ ನಾರಾಯಣಮಂಗಲದಲ್ಲಿ ನಡೆದಿದೆ.

ನಾರಾಯಣ ಮಂಗಲದ ವಿನೋದ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಇಬ್ಬರು ಕೂಲಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿದೆ. ಮನೆಯವರು ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಅಡುಗೆ ಕೋಣೆಯ ಬಾಗಿಲು ಮುರಿದು ಒಳ ನುಗ್ಗಿ ಮನೆಯ ಕೋಣೆಯಲ್ಲಿದ್ದ ಕಪಾಟಿನಲ್ಲಿರಿಸಲಾಗಿದ್ದ ಚಿನ್ನಾಭರಣವನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಕುಂಬಳೆ ಪೊಲೀಸರಿಗೆ ಲಭಿಸಿದ ದೂರಿನಂತೆ ತನಿಖೆ ನಡೆಯುತ್ತಿದೆ.

- Advertisement -

Related news

error: Content is protected !!