Monday, July 20, 2026
spot_imgspot_img
spot_imgspot_img

ಕುಂದಾಪುರ: ನಿವೃತ್ತ ಪೊಲೀಸ್ ಅಧಿಕಾರಿ ನಿತ್ಯಾನಂದ ಕೊರೊನಾಗೆ ಬಲಿ: ಅಂತ್ಯಕ್ರಿಯೆಗೆ ಸಂಬಂಧಿಕರಿಂದ ನಕಾರ; ಬೈರಂಪಳ್ಳಿ ಶ್ರಮಿಕ ತರುಣರ ತಂಡದಿಂದ ಅಂತ್ಯಕ್ರಿಯೆ

- Advertisement -
- Advertisement -

ಕುಂದಾಪುರ: ಮುಂಬೈ ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ಕುಂದಾಪುರ ತಾಲೂಕಿನ ನಾವುಂದ ವ್ಯಾಪ್ತಿಯ ನಿತ್ಯಾನಂದ(56) ರವರು ಕೊರೊನ ಸೊಂಕಿನಿಂದ ಮೃತಪಟ್ಟಿದ್ದಾರೆ.

ಅವರ ಅಂತ್ಯಕ್ರಿಯೆಗೆ ಸಂಬಂಧಿಕರು ನಿರಾಕರಿಸಿದಾಗ ಅವರ ಪತ್ನಿ ಉಮಾ ನಿತ್ಯಾನಂದರವರು ಬೈರಂಪಳ್ಳಿ ಶ್ರಮಿಕ ತರುಣರ ತಂಡವನ್ನು ಸಂಪರ್ಕಿಸಿ ಮನವಿ ಮಾಡಿದರು ತಕ್ಷಣವೇ ಅಧ್ಯಕ್ಷರು ಪ್ರಕಾಶ್ ಕುಲಾಲ್ ನೇತೃತ್ವದ ಶ್ರಮಿಕ ತರುಣರ ತಂಡ ಕಾರ್ಯ ಕೈಗೊಂಡು ಅವರ ಕುಟುಂಬ ಸಂಪ್ರದಾಯದಂತೆ ವಿಧಿವತ್ತಾಗಿ ಅಂತ್ಯಕ್ರಿಯೆಯನ್ನು ನೆರವೇರಿಸಿದರು.

ಈ ಕಾರ್ಯದಲ್ಲಿ ತಂಡದ ಗೌರವಾಧ್ಯಕ್ಷರು ಸಂತೋಷ್ ಕುಮಾರ್ ಬೈರಂಪಳ್ಳಿ, ಸಂಘಟನಾ ಕಾರ್ಯದರ್ಶಿ ಪ್ರಶಾಂತ ಹೆಗ್ಡೆ ಬೈಲಂಗಡಿ, ಸಾಮಾಜಿಕ ಜಾಲತಾಣ ಕಾರ್ಯದರ್ಶಿ ಶೋಧನ್ ಸುವರ್ಣ, ಎಸ್ ಪಿ ಕಛೇರಿಯಿಂದ ಸಂತೋಷ್ ಎಮ್ ಎನ್ ಭಾಗವಹಿಸಿದ್ದರು.

- Advertisement -

Related news

error: Content is protected !!