Monday, August 31, 2026
spot_imgspot_img
spot_imgspot_img

ಕೆಲ ದಿನದ ಹಿಂದೆ ನಾಪತ್ತೆಯಾಗಿದ್ದ ಕುಶಲಾನಗರದ ASIಯ ಶವ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ!

- Advertisement -
- Advertisement -
vtv vitla
vtv vitla

ಕುಶಾಲನಗರ: ಕೆಲದಿನಗಳ ಹಿಂದೆ ಕುಶಾಲನಗರದ ಎಎಸ್’ಐ ನಾಪತ್ತೆಯಾಗಿದ್ದು, ಇಂದು ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತ ವ್ಯಕ್ತಿ ಮೂಲತಃ ಹಾಸನ ಜಿಲ್ಲೆಯ ಕೊಣನೂರು ಸಿದ್ದಾಪುರ ಗೇಟ್ ನ ಎಎಸ್ ಐ ಸುರೇಶ್ ಎನ್ನಲಾಗಿದೆ. ಅವರು ಕುಶಾಲನಗರದ ಸಂಚಾರಿ ಠಾಣೆಯಲ್ಲಿ ಎಎಸ್’ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಅವರು ಕರ್ತವ್ಯದ ನಿಮಿತ್ತ ಮನೆಯಿಂದ ಹೋದವರು ಪೊಲೀಸ್ ಠಾಣೆಗೆ ತೆರಳದೇ ನಾಪತ್ತೆಯಾಗಿದ್ದರು. ಇತ್ತ ಪತಿ ಮನೆಗೆ ಬಾರದ ಹಿನ್ನಲೆ ಹುಡುಕಾಟ ನಡೆಸಿ ಅವರ ಪತ್ನಿ ಕುಶಾಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದ್ದರು. ಇದೀಗ ಅವರ ಶವವು ಹಾಸನ ಜಿಲ್ಲೆ ಕೊಣನೂರಿನ ಕೆರೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

vtv vitla
vtv vitla
- Advertisement -

Related news

error: Content is protected !!