Thursday, May 16, 2024
spot_imgspot_img
spot_imgspot_img

ಕೇಂದ್ರ ಸರ್ಕಾರದ ಕೈ ಸೇರಿದ ಭಾರತೀಯರ ಸ್ವಿಸ್ ಬ್ಯಾಂಕ್​ ಖಾತೆದಾರರ ವಿವರ

- Advertisement -G L Acharya panikkar
- Advertisement -

ನವದೆಹಲಿ: ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರ ಖಾತೆಗೂ ತಲಾ 15 ಲಕ್ಷ ರೂಪಾಯಿ ಜಮಾ ಮಾಡುವುದಾಗಿ ಅಂದು ಮೋದಿ ಕೊಟ್ಟ ಭರವಸೆ ಭರವಸೆಯಾಗಿಯೇ ಉಳಿದಿದೆ. ಜನರು ಹಾಗೂ ವಿರೋಧ ಪಕ್ಷದವರು ಇದನ್ನು ಹೇಳಿ-ಹೇಳಿ ಮೋದಿಯನ್ನು ಹಂಗಿಸುತ್ತಿದ್ದಾರೆ. ಆದ್ರೆ, ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣದ ವಿರುದ್ಧ ಕೇಂದ್ರ ಸರ್ಕಾರದ ಕಾರ್ಯಾಚರಣೆ ಸದ್ದಿಲ್ಲದೆ ನಡಯುತ್ತಿದೆ.

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣದ ಮಾಹಿತಿ ಹಾಗೂ ಖಾತೆದಾರರ ನಾಲ್ಕನೇ ವಿವರನ್ನು ಕೇಂದ್ರ ಸರ್ಕಾರ ಪಡೆದುಕೊಂಡಿದೆ.  ವೈಯುಕ್ತಿಕ ವ್ಯಕ್ತಿಗಳ ಖಾತೆ, ಕಾರ್ಪೋರೇಟ್, ಟ್ರಸ್ಟ್ ಖಾತೆ ಸೇರಿದಂತೆ 100ಕ್ಕೂ ಹೆಚ್ಚು ಖಾತೆಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ಪಡೆದುಕೊಂಡಿದೆ. ವಾರ್ಷಿಕ ಮಾಹಿತಿ ವಿನಿಮಿಯ ನೀತಿ ಅಡಿಯಲ್ಲಿ ಸ್ವಿಸ್ ಬ್ಯಾಂಕ್ 101 ದೇಶಗಳ 34 ಲಕ್ಷ ಖಾತೆಗಳ ಮಾಹಿತಿಯನ್ನು ಆಯಾ ದೇಶಕ್ಕೆ ನೀಡಿದೆ.

ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್‌ಟಿಎ) ಸೋಮವಾರ ನೀಡಿದ ಈ ವರ್ಷದ ಮಾಹಿತಿಯ ಪ್ರಕಾರ, ಅಲ್ಬೇನಿಯಾ, ಬ್ರೂನಿ ದಾರುಸ್ಸಲಾಮ್, ನೈಜೀರಿಯಾ, ಪೆರು ಮತ್ತು ಟರ್ಕಿ ಸಹ ಸ್ವಿಸ್ ಖಾತೆದಾರರ ಪಟ್ಟಿಗೆ ಸೇರಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಖಾತೆಗಳ ಸಂಖ್ಯೆ ಸುಮಾರು ಒಂದು ಲಕ್ಷದಷ್ಟು ಹೆಚ್ಚಾಗಿದೆ.

ಇದೇ ವೇಳೆ ಭಾರತೀಯರ ಉಳಿತಾಯ ಖಾತೆಯ ಠೇವಣಿ 4,800 ಕೋಟಿ ರು.ಗಳಿಗೆ ಏರಿಕೆಯಾಗಿದೆ. ಇದು ಕಳೆದ 7 ವರ್ಷಗಳ ಗರಿಷ್ಠ. 15.61 ಸಾವಿರ ಕೋಟಿ ರು.ಗಳಷ್ಟುಮೌಲ್ಯದ ಬಾಂಡ್‌, ಭದ್ರತೆಗಳನ್ನು ಭಾರತೀಯರ ಗ್ರಾಹಕರ ಹೆಸರಿನಲ್ಲಿ ಸ್ವಿಸ್‌ ಬ್ಯಾಂಕಿನಲ್ಲಿಡಲಾಗಿದೆ ಎಂದು ವರದಿ ತಿಳಿಸಿದೆ.

‘ಈ ಮೌಲ್ಯವನ್ನು ಭಾರತೀಯರು ಸ್ವಿಸ್‌ ಬ್ಯಾಂಕುಗಳಲ್ಲಿಟ್ಟಕಪ್ಪುಹಣದ ಪ್ರಮಾಣ ಎಂಬಂತೆ ಬಿಂಬಿಸಬಾರದು. ಜೊತೆಗೆ ಅನಿವಾಸಿ ಭಾರತೀಯರು ಹಾಗೂ ಇನ್ನೊಂದು ದೇಶದ ನಿವಾಸಿಯ ಹೆಸರಿನಲ್ಲಿ ಭಾರತೀಯರು ಠೇವಣಿ ಮಾಡಿದ ಹಣವನ್ನು ಇದು ಒಳಗೊಂಡಿಲ್ಲ. ಭಾರತದಲ್ಲಿರುವ ಸ್ವಿಸ್‌ ಬ್ಯಾಂಕ್‌ ಶಾಖೆ ಹಾಗೂ ಭಾರತೀಯ ಬ್ಯಾಂಕ್‌ ಹಾಗೂ ಸ್ವಿಸ್‌ ಬ್ಯಾಂಕ್‌ ನಡುವಿನ ವ್ಯವಹಾರ ಹೆಚ್ಚಳವಾದ ಕಾರಣದಿಂದ ಠೇವಣಿಯಲ್ಲಿ ಏರಿಕೆಯಾಗಿದೆ ಎಂದು ವರದಿ ಹೇಳಿದೆ.

ಗೌಪ್ಯತೆಗೆ ಹೆಸರಾಗಿರುವ ಭಾರತದಲ್ಲಿನ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌ಗಳು ಮತ್ತು ಸ್ವಿಜರ್ಲೆಂಡಿನಲ್ಲಿರುವ ಬ್ಯಾಂಕ್‌ಗಳಲ್ಲಿ ಭಾರತೀಯರು ಮತ್ತು ಭಾರತೀಯ ಮೂಲದ ಸಂಸ್ಥೆಗಳು ಇಟ್ಟಿರುವ ಹಣದ ಮೊತ್ತ 30500 ಕೋಟಿ ರು.ಗೆ ಏರಿಕೆಯಾಗಿದೆ. ಇದು ಕಳೆದ 14 ವರ್ಷಗಳಲ್ಲೇ ಗರಿಷ್ಠ. ಎಂದು ಸ್ವಿಸ್‌ ಸೆಂಟ್ರಲ್‌ ಬ್ಯಾಂಕಿನ ವಾರ್ಷಿಕ ವರದಿಯು ತಿಳಿಸಿದೆ. 2020ರಲ್ಲಿ ಭಾರತೀಯರ ನಿಧಿಯ ಮೌಲ್ಯ 20,700 ಕೋಟಿ ರು.ಗಳಷ್ಟಿತ್ತು. 2006ರಲ್ಲಿ ಭಾರತೀಯರ ಸ್ವಿಸ್‌ ಖಾತೆಗಳಲ್ಲಿ 50,000 ಕೋಟಿ ರು.ಗಳಷ್ಟುಹಣ ಠೇವಣಿಗಳ ರೂಪದಲ್ಲಿತ್ತು.

ಇನ್ನು 5ನೇ ಹಂತದ ಮಾಹಿತಿಗಳನ್ನು ಸೆಪ್ಟೆಂಬರ್ 2023ರಲ್ಲಿ ಸ್ವಿಸ್ ಬ್ಯಾಂಕ್ ಭಾರತ ಸೇರಿದಂತೆ ಹಲವು ದೇಶಗಳಿಗೆ ನೀಡಲಿದೆ ಎಂದು ವರದಿ ಹೇಳಿದೆ.

- Advertisement -

Related news

error: Content is protected !!