Wednesday, April 24, 2024
spot_imgspot_img
spot_imgspot_img

ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಇಂದು ಹಾಲಿ ಚಾಂಪಿಯನ್ ಮುಂಬೈ- ಚೆನ್ನೈ ಕಾದಾಟ.

- Advertisement -G L Acharya panikkar
- Advertisement -

ಅಬುಧಾಬಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳ ನಡುವೆ ಇಂದು ಯುಎಇಯ  ಶೇಖ್ ಜಯೆದ್ ಕ್ರೀಡಾಂಗಣದಲ್ಲಿ  ಐಪಿಎಲ್ 13ನೇ ಆವೃತ್ತಿ ಅಧಿಕೃತ ಆರಂಭವಾಗಲಿದೆ.

ಕಳೆದ ಐಪಿಎಲ್ ನಲ್ಲಿ ಹೈದರಾಬಾದ್‌ನಲ್ಲಿ ನಡೆದ 12ನೇ ಆವೃತ್ತಿಯ ಫೈನಲ್‌ನಲ್ಲಿ  ಕೇವಲ 1 ರನ್‌ನಿಂದ ಕಳೆದುಕೊಂಡಿದ್ದ ಎಂಎಸ್ ಧೋನಿ ಸಾರಥ್ಯದ ಸಿಎಸ್‌ಕೆ ತಂಡ ಇದೀಗ ಉದ್ಘಾಟನಾ ಪಂದ್ಯದಲ್ಲಿ ಸೇಡು ತೀರಿಸಿಕೊಂಡು ಶುಭಾರಂಭದಲ್ಲಿ ಇದೆ.4ನೇ ಬಾರಿ ಚಾಂಪಿಯನ್‌ಪಟ್ಟ ಒಲಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡ ಸಿಎಸ್ ಕೆ ಈ ಬಾರಿ ಉತ್ತಮ ಪ್ರದರ್ಶನ ನೀಡಿ ಗೆಲುವು ತವಕದಲ್ಲಿದೆ.

ಆರಂಭದಲ್ಲೇ ತಂಡದ ಇಬ್ಬರು ಆಟಗಾರರಿಗೆ ಕರೊನಾ, ಸುರೇಶ್ ರೈನಾ, ಹರ್ಭಜನ್ ಸಿಂಗ್ ಗೈರಿನಿಂದ ತತ್ತರಿಸಿರುವ ಸಿಎಸ್‌ಕೆ ಗೆಲುವಿನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ. ಧೋನಿ ನಾಯಕತ್ವವೇ ತಂಡಕ್ಕೆ ಸ್ಫೂರ್ತಿಯಾಗಿದೆ.

4 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ  ವರ್ಷ ಕೂಡ ಉತ್ತಮ ಪ್ರದರ್ಶನ ನೀಡಿ ಫೈನಲ್ ತಲುಪುವುದು ಹಂಬಲಲ್ಲಿದೆ. ಸಿಎಸ್‌ಕೆ ವಿರುದ್ಧ ಮೇಲುಗೈ ಹೊಂದಿರುವ ಮುಂಬೈ ಇಂಡಿಯನ್ಸ್ ಕೂಡ ಶುಭಾರಂಭದ ನಿರೀಕ್ಷೆಯಲ್ಲಿದೆ. ಸ್ಟಾರ್ ಆಟಗಾರನ್ನೇ ಹೊಂದಿರುವ ಮುಂಬೈ ತಂಡಕ್ಕೆ ಅನುಭವಿ ಲಸಿತ್ ಮಾಲಿಂಗ ಅನುಪಸ್ಥಿತಿ ಕಾಡಲಿದೆ.

- Advertisement -

Related news

error: Content is protected !!