- Advertisement -
- Advertisement -


ದೇವಸ್ಥಾನದ ಆರ್ಚಕನೊಬ್ಬ ಬುರ್ಖಾ ಧರಿಸಿಕೊಂಡು ರಸ್ತೆಯಲ್ಲಿ ಸುತ್ತಾಡುತ್ತಿದ್ದಾಗ ಜನರ ಕೈಗೆ ಸಿಕ್ಕಿಬಿದ್ದ ಘಟನೆ ಕೇರಳದ ಕೊಯಿಲಾಂಡಿಯಲ್ಲಿ ನಡೆದಿದೆ. ಜಿಷ್ಣು ನಂಬೂತಿರಿ (27) ಮೆಪ್ಪಯೂರ್ ಹತ್ತಿರದ ದೇವಸ್ಥಾನದಲ್ಲಿ ಆರ್ಚಕರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಬುರ್ಖಾ ಹಾಕಿಕೊಂಡು ರಸ್ತೆಯಲ್ಲಿ ತಿರುಗುತ್ತಿದ್ದಾಗ, ಸಂಶಯಗೊಂಡ ಸ್ಥಳೀಯರು ಕೊಯಿಲಾಂಡಿ ಜಂಕ್ಷನ್ ಬಳಿ ತಡೆದು ವಿಚಾರಿಸಿದಾಗ, ಬುರ್ಖಾದೊಳಗಿರುವುದು ಪುರುಷನೆಂದು ಸ್ಪಷ್ಟವಾಗಿದೆ.
ಸ್ಥಳೀಯರ ಬಳಿ ತನಗೆ ಚಿಕನ್ ಫಾಕ್ಸ್ ಇದೆ ಆ ಕಾರಣದಿಂದ ಬುರ್ಖಾ ಹಾಕಿಕೊಂಡು ತಿರುಗಾಡುತ್ತಿದ್ದೇನೆ ಎಂದಿದ್ದಾರೆ. ಸ್ಥಳೀಯರು ಬುರ್ಖಾ ಹಾಕಿಕೊಂಡು ಸಂಶಯದಿಂದ ಅಲೆದಾಡುತ್ತಿರುವ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಪೊಲೀಸರಿಗೆ ಆರ್ಚಕನಲ್ಲಿ ಚಿಕನ್ ಫಾಕ್ಸ್ ನ ಯಾವುದೇ ಪ್ರಾಥಮಿಕ ಲಕ್ಷಣ ಕಂಡು ಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
- Advertisement -








