Sunday, May 5, 2024
spot_imgspot_img
spot_imgspot_img

ಕೇರಳ : ಗರ್ಭಿಣಿ ಮಹಿಳೆ ಆತ್ಮಹತ್ಯೆ ಪ್ರಕರಣ; ಪತಿ ಮತ್ತು ಅತ್ತೆಯನ್ನು ಬಂಧಿಸಿದ ಪೊಲೀಸರು

- Advertisement -G L Acharya panikkar
- Advertisement -
vtv vitla

ಕೇರಳ : ಕೋಝಿಕ್ಕೋಡ್ ನಲ್ಲಿ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತಿ ಮತ್ತು ಅತ್ತೆಯನ್ನು ಪೊಲೀಸರು ಬಂಧಿಸಿದ್ದಾರೆ.

ನಾದಪುರಂ ಡಿವೈಎಸ್ಪಿ ನೇತೃತ್ವದ ತಂಡ ಆಕೆಯ ಪತಿ ಜಮ್ಶೀ ರ್ ಮತ್ತು ಅತ್ತೆ ನಫೀಸಾ ಅವರನ್ನು ಬಂಧಿಸಿದೆ. ಐದು ತಿಂಗಳ ಗರ್ಭಿಣಿಯಾಗಿದ್ದ ಅಸ್ಮಿನಾ ಕಳೆದ ತಿಂಗಳು 13 ರಂದು ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅಸ್ಮಿನಾ ಅವರಿಗೆ ಪತಿ ಮತ್ತು ಕುಟುಂಬದವರು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಕುಟುಂಬದವರು ತೊಟ್ಟಿಲಪಾಲಂ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿ ಕಳೆದ ದಿನ ಕ್ರಿಯಾಸಮಿತಿ ರಚಿಸಲಾಗಿತ್ತು . ಕೊಲೆ ಆರೋಪವು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ನಾದಪುರಂ ಡಿವೈಎಸ್ಪಿ ನೇತೃತ್ವದ ತಂಡ ಜಮ್ಶೀರ್‍ ಮತ್ತು ಆತನ ತಾಯಿ ನಫೀಸಾ ಅವರನ್ನು ಬಂಧಿಸಿದೆ. ಕೌಟುಂಬಿಕ ಹಿಂಸಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ.

- Advertisement -

Related news

error: Content is protected !!