Friday, May 3, 2024
spot_imgspot_img
spot_imgspot_img

ಪುತ್ತೂರು: ನಾನು ಕೋಮು ಪ್ರಚೋದನೆ ಮಾಡಿಲ್ಲ, ಮತಾಂತರ ಮಾಡುವುದಕ್ಕೆ ಮಾತ್ರ ನನ್ನ ವಿರೋಧ; ಡಾ. ಪ್ರಸಾದ್ ಭಂಡಾರಿ ಸ್ಪಷ್ಟನೆ

- Advertisement -G L Acharya panikkar
- Advertisement -

ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾ. ಪ್ರಸಾದ್ ಭಂಡಾರಿಯವರು ದ್ವೇಷಪೂರಿತ ಭಾಷಣ ಮಾಡಿರುವುದಾಗಿ ಕ್ರಿಶ್ಚಿಯನ್‌ ಶಿಕ್ಷಣ ಸಂಸ್ಥೆಗಳು ಆರೋಪಿಸಿದ್ದು, ಇದೀಗ ಡಾ. ಪ್ರಸಾದ್‌ ಭಂಡಾರಿರವರು ಸ್ಪಷ್ಟನೆ ನೀಡಿದ್ದಾರೆ.

“ನಾನು ಕೋಮು ಪ್ರಚೋದನೆ ಮಾಡಿಲ್ಲ, ಮತಾಂತರ ಮಾಡುವುದಕ್ಕೆ ಮಾತ್ರ ನನ್ನ ವಿರೋಧ” ಎಂದು ಸ್ಪಷ್ಟನೆ ನೀಡಿದ್ದಾರೆ.

ಪುತ್ತೂರು ಸಹಾಯಕ ಕಮಿಷನರ್ ಮತ್ತು ಪೊಲೀಸ್ ಠಾಣಾಧಿಕಾರಿಯವರಿಗೆ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳಿಂದ ದೂರು

.ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾ. ಪ್ರಸಾದ್ ಭಂಡಾರಿಯವರು ದ್ವೇಷಪೂರಿತ ಭಾಷಣ ಮಾಡಿರುವುದಾಗಿ ಆರೋಪಿಸಿ ಅವರ ವಿರುದ್ಧ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳು, ಫಾ. ಪತ್ರಾವೊ ಆಸ್ಪತ್ರೆ, ಬೆಥನಿ ಶಿಕ್ಷಣ ಸಂಸ್ಥೆಗಳ ಪರವಾಗಿ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರು ಹಾಗೂ ಮಾಯ್ ದೆ ದೇವುಸ್ ಚರ್ಚಿನ ಪ್ರದಾನ ಧರ್ಮಗುರು ಫಾ. ಲಾರೆನ್ಸ್ ಮಸ್ಕರೇನಸ್ ಮತ್ತು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತಾರವರ ನೇತೃತ್ವದಲ್ಲಿ ಪುತ್ತೂರು ಸಹಾಯಕ ಕಮಿಷನರ್ ಮತ್ತು ಪೊಲೀಸ್ ಠಾಣಾಧಿಕಾರಿಯವರನ್ನು ಬೇಟಿ ಮಾಡಿ ಅವರ ವಿರುದ್ಧ ದೂರು ದಾಖಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಸಹಾಯಕ ಕಮಿಷನರ್ ಮತ್ತು ಪೊಲೀಸ್ ಠಾಣಾಧಿಕಾರಿಯವರು ಮನವಿಯನ್ನು ಸ್ವೀಕರಿಸಿ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದರು. ನಂತರ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.

ಸದ್ರಿ ನಿಯೋಗದಲ್ಲಿ ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು, ಆಡಳಿತ ಮಂಡಳಿಯ ಸದಸ್ಯರು, ಚರ್ಚಿನ ವಿವಿಧ ಸಂಘಟನೆಗಳ ಅಧ್ಯಕ್ಷರು, ಚರ್ಚ್ ಪಾಲನಾ ಮಂಡಳಿಯ ಸದಸ್ಯರು ಹಾಗೂ ಕ್ರೈಸ್ತ ಬಾಂಧವರು ಹಾಜರಿದ್ದರು.

- Advertisement -

Related news

error: Content is protected !!