Thursday, March 28, 2024
spot_imgspot_img
spot_imgspot_img

ಕೇರಳ ಮಾಡೆಲ್; ಚಿನ್ನ ಕಳ್ಳ ಸಾಗಾಟದಲ್ಲಿ ದೇಶದಲ್ಲೇ ಕೇರಳ ನಂ.1

- Advertisement -G L Acharya panikkar
- Advertisement -

ಕೇರಳ : ವಿದೇಶಗಳಿಂದ ಭಾರತಕ್ಕೆ ಚಿನ್ನ ಕಳ್ಳ ಸಾಗಾಟ ಇತ್ತೀಚೆಗೆ ಮಿತಿಮೀರತೊಡಗಿದ್ದು, ಅದರಲ್ಲೂ ಕೇರಳಕ್ಕೆ ವಿದೇಶದಿಂದ ಅತೀ ಹೆಚ್ಚು ಪ್ರಮಾಣದಲ್ಲಿ ಚಿನ್ನ ಕಳ್ಳಸಾಗಾಟ, ಮಾಡಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವಾಲಯ ಹೊರಬಿಟ್ಟ ವರದಿಯಲ್ಲಿ ಈ ವಿಷಯ ಬಹಿರಂಗಪಡಿಸಲಾಗಿದೆ. ಹಿ೦ದಿನ ವರ್ಷಗಳೊಂದಿಗೆ ಹೋಲಿಸಿದಲ್ಲಿ ಭಾರತಕ್ಕೆ ಚಿನ್ನ ಕಳ್ಳಸಾಗಾಟ ಕಳೆದ ವರ್ಷ ಶೇ. 47ರಷ್ಟು ಹೆಚ್ಚಿದೆ.

2021ರಲ್ಲಿ ದೇಶದ ವಿವಿಧೆಡೆಗಳಿಂದಾಗಿ ಕಳ್ಳಸಾಗಾಟದ ಮೂಲಕ ತರಲಾಗಿದ್ದ 2,154,58 ಕಿಲೋ ಗ್ರಾಂ ಚಿನ್ನ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದು ಕಳೆದ ವರ್ಷ 2,383.89 ಕಿಲೋ ಗ್ರಾಂಗೇರಿದೆ, ಇನ್ನು ಈ ವರ್ಷದ ಮೊದಲ ಎರಡು ವಾರದಲ್ಲಿ ಮಾತ್ರವಾಗಿ 916.37 ಕಿಲೋ ಗ್ರಾಂ ಚಿನ್ನ ವಶಪಡಿಸಲಾಗಿದೆ. ಕೇರಳದಲ್ಲಿ ಮಾತ್ರವಾಗಿ ಕಳೆದ ವರ್ಷ ಈ ರೀತಿಯಲ್ಲಿ ತರಲಾಗಿದ್ದ 755.81 ಕಿಲೋ ಗ್ರಾಂ ಚಿನ್ನ ವಶಪಡಿಸಲಾಗಿದೆ. ಅದಕ್ಕಿಂತ ಹಿಂದಿನ ವರ್ಷ 586.95 ಕಿ.ಗ್ರಾಂ ಚಿನ್ನ ರಾಜ್ಯದ ವಿವಿಧೆಡೆಗಳಿಂದ ವಶಪಡಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಬಂಧಿತರಾದವರಲ್ಲಿ ಬಹುಪಾಲು ಮಂದಿ ಕಾಸರಗೋಡು ಜಿಲ್ಲೆಯವರೇ ಆಗಿದ್ದಾರೆ.

ಚಿನ್ನ ಕಳ್ಳ ಸಾಗಾಟಕ್ಕೆ ಸಂಬಂಧಿಸಿ 2021ರಲ್ಲಿ ದೇಶದಲ್ಲಿ ಒಟ್ಟಾರೆಯಾಗಿ 2,445 ಪ್ರಕರಣ ದಾಖಲುಗೊಂಡಿವೆ. ಕಳೆದ ವರ್ಷ ಅದು 3,982ಕ್ಕೇರಿದೆ. ಕೇರಳದಲ್ಲಿ ಮಾತ್ರವಾಗಿ ಕಳೆದ ವರ್ಷ ಇಂತಹ 1,035 ಪ್ರಕರಣಗಳು ದಾಖಲುಗೊಂಡಿವೆ. ಕಳೆದ ಮೂರು ವರ್ಷದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಮೂರು ಚಿನ್ನ ಕಳ್ಳಸಾಗಾಟ ಪ್ರಕರಣಗಳನ್ನು ಕೈಗೆತ್ತಿಕೊಂಡು ತನಿಖೆ ನಡೆಸಿ ಅದರ ದೋಷಾರೋಪ ಪಟ್ಟಿ ಸಂಬಂಧಿಸಿ ನ್ಯಾಯಾಲಯಗಳಿಗೆ ಈಗಾಗಲೇ ಸಲ್ಲಿಸಿದೆ. ಕೇರಳದ ನಂತರ ದೇಶದಲ್ಲಿ ಅತೀ ಹೆಚ್ಚು ಚಿನ್ನ ಕಳ್ಳಸಾಗಾಟ ನಡೆಯುತ್ತಿರುವ ರಾಜ್ಯ ಮಹಾರಾಷ್ಟ್ರ (535.65 ಕಿಲೋ ಗ್ರಾಂ ಚಿನ್ನ), ಮೂರನೇ ಸ್ಥಾನದಲ್ಲಿ ತಮಿಳುನಾಡು (519 ಕಿಲೋ ಗ್ರಾಂ ಚಿನ್ನ) ಇದೆ. ವಿಶ್ವದಲ್ಲಿ ಅತಿ ಹೆಚ್ಚು ಚಿನ್ನ ಬಳಸುತ್ತಿರುವುದು ಚೀನಾವಾದರೆ ಭಾರತ ನಂತರದ ಸ್ಥಾನದಲ್ಲಿದೆ.

- Advertisement -

Related news

error: Content is protected !!