Tuesday, April 30, 2024
spot_imgspot_img
spot_imgspot_img

ಕೈ ಪಂಪ್‌ನಲ್ಲಿ ಹರಿದು ಬರುತ್ತಿತ್ತು ಮದ್ಯ.!! ನೋಡಿ ದಂಗಾದ ಪೊಲೀಸರು

- Advertisement -G L Acharya panikkar
- Advertisement -

ಸಾಮಾನ್ಯವಾಗಿ ಭೂಮಿಯ ಆಳದಿಂದ ನೀರೆತ್ತಲು ಕೈ ಪಂಪ್‌ಗಳನ್ನು ಬಳಸಲಾಗುತ್ತದೆ. ಆದರೆ ಮಧ್ಯಪ್ರದೇಶದ ಈ ಗ್ರಾಮದಲ್ಲಿ ಕೈ ಪಂಪ್‌ನಲ್ಲಿ ಮದ್ಯವೇ ಹರಿದು ಬರುತ್ತಿದೆ.

ಅಕ್ರಮ ಮದ್ಯದ ಅಡ್ಡೆಗಳಿಗೆ ದಾಳಿ ನಡೆಸಿರುವ ಪೊಲೀಸರು ಕೈ ಪಂಪ್‌ಗಳಲ್ಲಿ ಮದ್ಯ ಬರುವುದನ್ನು ನೋಡಿ ದಂಗಾಗಿದ್ದಾರೆ. ಮಧ್ಯಪ್ರದೇಶದ ಗುನಾ ಜಿಲ್ಲೆಯ ಭಾನ್ಪುರ ಗ್ರಾಮದಲ್ಲಿ ಭೂಮಿಯೊಳಗಡೆ ಅಡಗಿಸಿಟ್ಟ ಮದ್ಯದ ಡ್ರಮ್‌ಗಳಿಂದ ಮದ್ಯ ಸರಬರಾಜು ಮಾಡಲು ಕೈ ಪಂಪ್‌ಗಳನ್ನು ಅಳವಡಿಸಲಾಗಿರುವುದೇ ಕೈ ಪಂಪ್‌ಗಳ ಮುಖಾಂತರ ಮದ್ಯ ನೀರಿನಂತೆ ಹರಿದು ಬರಲು ಕಾರಣವಾಗಿದೆ.

ಜನ ಕಚ್ಚಾ ಮದ್ಯವನ್ನು ಡ್ರಮ್‌ಗಳಲ್ಲಿ ತುಂಬಿಸಿ ಭೂಮಿಯೊಳಗೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಮೇವಿನ ಅಡಿಯಲ್ಲಿ ಅಡಗಿಸಿಟ್ಟಿದ್ದರು. ಅದರಿಂದಲೇ ಕೈ ಪಂಪ್‌ ಮುಖಾಂತರ ಮದ್ಯವನ್ನು ಪಡೆದುಕೊಳ್ಳಲಾಗುತ್ತಿತ್ತು. ಪೊಲೀಸರಿಗೆ ದಾಳಿ ವೇಳೆ ಈ ವಿಚಾರ ಗೊತ್ತಾಗಿದ್ದು, ಮದ್ಯ ತುಂಬಿಸಿಟ್ಟ ಎಂಟು ಡ್ರಮ್‌ಗಳು ಹಾಗೂ ಕೈ ಪಂಪ್‌ನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಮದ್ಯ ವ್ಯಾಪಾರಕ್ಕಾಗಿಯೂ ಭೂಗತ ಹೊಂಡಗಳನ್ನು ಅಗೆದು ಜನ ಮದ್ಯ ತುಂಬಿದ ಡ್ರಮ್‌ಗಳನ್ನು ಅದರಲ್ಲಿ ಹೂತಿಟ್ಟಿದ್ದರು. ಕೈ ಪಂಪ್‌ ಬಳಸಿ ಬೇಕಾದಾಗ ಇದರಿಂದ ಮದ್ಯವನ್ನು ಹೊರ ತೆಗೆಯುತ್ತಿದ್ದರು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. ಎಂಟು ಮಂದಿಯನ್ನು ಈ ಅಕ್ರಮದ ವಿಚಾರದಲ್ಲಿ ಈಗಾಗಲೇ ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ಬಲೆ ಬೀಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!