Friday, June 19, 2026
spot_imgspot_img
spot_imgspot_img

ಕೊಡಾಜೆ: ಪುರುಷರ ಆಧುನಿಕ ವಿನ್ಯಾಸಭರಿತ ಉಡುಪುಗಳ ಮಳಿಗೆ “ಎಸ್.ಕೆ ಫ್ಯಾಶನ್” ನಿಧಾ ಆರ್ಕೇಡ್ ಮಹಡಿಯಲ್ಲಿ ಶುಭಾರಂಭ

- Advertisement -
- Advertisement -

ಕೊಡಾಜೆ: ಪುರುಷರ ಆಧುನಿಕ ವಿನ್ಯಾಸಭರಿತ ಉಡುಪುಗಳ ಮಳಿಗೆ ಎಸ್.ಕೆ ಫ್ಯಾಶನ್ ಕೊಡಾಜೆ ಮುಖ್ಯರಸ್ತೆಯ ನಿಧಾ ಆರ್ಕೇಡ್ ಮಹಡಿಯಲ್ಲಿ ಶುಭಾರಂಭಗೊಂಡಿತು.

ಬೆಳಗ್ಗೆ ಗಣಪತಿ ಹವನ ನಡೆದು ಬಳಿಕ ಮಳಿಗೆಯ ಉದ್ಘಾಟನೆ ನಡೆಯಿತು. ತಾಲೂಕು ಕಛೇರಿ ಬಂಟ್ವಾಳ ತಾಲೂಕು ನಿರ್ವಾಹಕರಾದ ವಿಶು ಕುಮಾರ್, ರಿಬ್ಬನ್ ಕತ್ತರಿಸಿ ಮಳಿಗೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ನಟ ಚಂದ್ರಹಾಸ ರೈ ಮಾಣಿ, ಸನತ್ ರೈ ತುಂಬೆಕೋಡಿ, ಮಾಜಿ ಅಧ್ಯಕ್ಷರು ಅನಂತಾಡಿ ಗ್ರಾಮ ಪಂಚಾಯತ್, ಗಣೇಶ್ ಪೂಜಾರಿ, ಅಧ್ಯಕ್ಷರು ಅನಂತಾಡಿ ಗ್ರಾಮ ಪಂಚಾಯತ್, ಸತೀಶ್ ಜೋಡುಮಾರ್ಗ ಮಳಿಗೆಯ ಅಭಿವೃದ್ಧಿಗೆ ಶುಭಹಾರೈಸಿದರು.

ಆಧುನಿಕ ಆಯುರ್ವೇದ ನಾಟಿ ವೈದ್ಯ ಖ್ಯಾತಿಯ ದಿ. ಬೈರ ಪಂಡಿತ್‍ರವರ ಮೊಮ್ಮಗ ಆದೇಶ್ ಪಂಡಿತ್ ಅನಂತಾಡಿ ಮಾಲಕತ್ವದ ಈ ಮಳಿಗೆಯಲ್ಲಿ ಪುರುಷರ ಆಧುನಿಕ ವಿನ್ಯಾಸಭರಿತ ಉಡುಪುಗಳು, ಜೀನ್ಸ್ ಪ್ಯಾಂಟ್‍ಗಳು, ಫಾರ್ಮಲ್ ಪ್ಯಾಂಟ್‍ಗಳು, ಫಾರ್ಮಲ್ ಡ್ರೆಸ್‍ಗಳು, ಎಲ್ಲಾ ಬ್ರ್ಯಾಂಡೆಡ್ ಕಂಪೆನಿಗಳ ಶರ್ಟ್ ಮತ್ತು ಪ್ಯಾಂಟ್‍ಗಳು ಲಭ್ಯವಿದೆ.

ಈ ಸಂದರ್ಭದಲ್ಲಿ ಸೋಮನಾಥ ಪಂಡಿತ್, ವಿಶ್ವನಾಥ ಪಂಡಿತ್, ಹರಿಪ್ರಸಾದ್ ಪಂಡಿತ್, ಕುಟುಂಬಸ್ಥರು, ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

astr
- Advertisement -

Related news

error: Content is protected !!