Friday, March 29, 2024
spot_imgspot_img
spot_imgspot_img

ಕೊರಗಜ್ಜನಿಗೆ ಅಪಮಾನ ಹಿನ್ನೆಲೆ ವಿಟ್ಲ ಸ್ವಯಂ ಘೋಷಿತ ಬಂದ್; ಬೆಂಬಲ ಸೂಚಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಹಿಂದೂ ಜಾಗರಣ ವೇದಿಕೆ

- Advertisement -G L Acharya panikkar
- Advertisement -
vtv vitla
vtv vitla

ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ವತಿಯಿಂದ ಮೊನ್ನೆ ಸಾಲೆತ್ತೂರಿನ ಮದುವೆಯ ಮನೆಯಲ್ಲಿ ನಡೆದ ತುಳುನಾಡಿನ ಕಾರ್ನಿಕದ ದೈವವಾದ ಕೊರಗಜ್ಜನಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ 11ಗಂಟೆಯಿಂದ 12ಗಂಟೆಯವರೆಗೆ ವಿಟ್ಲ ತಾಲೂಕಿನ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಪ್ರತಿಭಟನೆ ಮತ್ತು ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿತ್ತು.

vtv vitla

ಈ ಸ್ವಯಂ ಘೋಷಿತ ಬಂದ್’ಗೆ ಬೆಂಬಲ ನೀಡಿದ ವಿಟ್ಲ ಪೇಟೆಯ ಎಲ್ಲಾ ಅಂಗಡಿಯ ಮಾಲಕರಿಗೆ, ರಿಕ್ಷಾ ಚಾಲಕ, ಮಾಲಕರಿಗೆ, ಬಸ್ಸು ಮಾಲಕ, ಚಾಲಕರಿಗೆ ಸಂಘಪರಿವಾರದ ಎಲ್ಲಾ ಪ್ರಮುಖರಿಗೆ ಮತ್ತು ಪರಿವಾರ ಸಂಘಟನೆಯ ಕಾರ್ಯಕರ್ತ ಬಂಧುಗಳಿಗೆ, ಭಾಗವಹಿಸಿದ ಎಲ್ಲಾ ಮಾತೆಯರಿಗೆ, ದೃಶ್ಯ ಮತ್ತು ಪತ್ರಿಕಾ ಮಾಧ್ಯಮದ ಬಂಧುಗಳಿಗೆ ಪೊಲೀಸ್ ಇಲಾಖೆ ಹಾಗೂ ಜಾಗೃತ ಹಿಂದೂ ಸಮಾಜದ ಎಲ್ಲ ಬಂಧುಗಳಿಗೆ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ವತಿಯಿಂದ ಧನ್ಯವಾದಗಳು. ಮತ್ತು ಮುಂದಕ್ಕೆ ಇಂತಹ ಘಟನೆ ಮತ್ತೆ ಮರುಕಳಿಸಬಾರದು ಹಾಗೂ ಹಿಂದೂ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ನಾವೆಲ್ಲರೂ ಒಟ್ಟಾಗಿರಬೇಕೆಂದು ಸಂದೇಶ ಸಾರಿದ್ದಾರೆ.

ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆಯ ಅಧ್ಯಕ್ಷ ಜಗದೀಶ್ ನೆತ್ತರಕೆರೆ, ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಪುತ್ತೂರು ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

Related news

error: Content is protected !!