Friday, May 3, 2024
spot_imgspot_img
spot_imgspot_img

ಕೊಲ್ಯ: ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ವಿಶೇಷ ಭಜನಾ ಸೇವೆ ಹಾಗೂ ವಿಶೇಷ ಮಹಾಪೂಜೆ

- Advertisement -G L Acharya panikkar
- Advertisement -
driving

ಕೊಲ್ಯ: ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ, ಸೋಮೇಶ್ವರ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.)ಕೊಲ್ಯ ಘಟಕ ಇದರ ವತಿಯಿಂದ, ಒಂದೇ ಜಾತಿ,ಒಂದೇ ಮತ,ಒಂದೇ ದೇವರು ಎಂದು ಲೋಕ ಮುಖಕ್ಕೆ ಸಾರಿದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಮಹಾಸಮಾಧಿಯ ಪುಣ್ಯ ದಿನದ ಅಂಗವಾಗಿ ವಿಶೇಷ ಭಜನಾ ಸೇವೆ ಹಾಗೂ ವಿಶೇಷ ಮಹಾಪೂಜೆಯು ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ ಇಲ್ಲಿ ನೆರವೇರಿತು.

ಬಳಿಕ ಯುವವಾಹಿನಿ (ರಿ.)ಕೊಲ್ಯ ಘಟಕವು ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 167 ನೇ ಜನ್ಮ ಜಯಂತಿಯ ಅಂಗವಾಗಿ ಅಂತರ್ಜಾಲದಲ್ಲಿ ಏಪರ್ಡಿಸಿದ ಗುರುಶ್ಲೋಕ ಕಂಠಪಾಠ,ಗಾಯನ ಸ್ಪರ್ಧೆ “ಶ್ರೀ ಗುರುಶೃತಿ-2021” ಇದರ ಬಹುಮಾನ ವಿತರಣಾ ಸಮಾರಂಭವು ನಾರಾಯಣ ಗುರು ಸಭಾಭವನದಲ್ಲಿ ನೆರವೇರಿತು.

ಸಭಾ ಕಾರ್ಯಕ್ರಮವನ್ನು ಯುವವಾಹಿನಿ (ರಿ)ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ.ರಾಜಾರಾಮ್.ಕೆ.ಬಿ ಉಪ್ಪಿನಂಗಡಿ ಇವರು ಉದ್ಘಾಟಿಸಿ ಮಾತನಾಡಿದರು ಹಾಗೂ ಸಭಾಧ್ಯಕ್ಷತೆಯನ್ನು ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷ ಮೋಹನ್ ಮಾಡೂರು ವಹಿಸಿದ್ದರು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕ ಜಗದೀಶ್ಚಂದ್ರ ಡಿ.ಕೆ ಮೂಡುಬಿದಿರೆ ಮತ್ತು ಯುವಸಿಂಚನ ಪತ್ರಿಕೆಯ ಸಂಪಾದಕ ದೇವರಾಜ್ ಅಮೀನ್ ಬಜ್ಪೆ ಅತಿಥಿಗಳಾಗಿ ಭಾಗವಹಿಸಿದ್ದರು.

ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಆನಂದ ಮಲಯಾಳಕೋಡಿ,ಕೊಲ್ಯ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ನ ಅಧ್ಯಕ್ಷ ವೇಣುಗೋಪಾಲ್ ಕೊಲ್ಯ, ಸಮಿತಿಯ ಅಧ್ಯಕ್ಷರು ಪದ್ಮನಾಭ ಕೊಲ್ಯ,ಯುವವಾಹಿನಿ ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕಿ ಅರ್ಚನಾ.ಎಂ.ಬಂಗೇರ, ನಾರಾಯಣ ಗುರು ಮಹಿಳಾ ಮಂಡಳಿಯ ಅಧ್ಯಕ್ಷೆ ಕುಸುಮ ಭರತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

“ಗುರುಶೃತಿ-2021” ಸ್ಪರ್ಧೆಯು ಕ್ರಮವಾಗಿ ಮೂರು ವಿಭಾಗಗಳಲ್ಲಿ ಆಯೋಜನೆಗೊಂಡಿದ್ದು, ವಿವಿಧ ಸಮಾಜದ ಬಂಧುಗಳು ಜಾತಿ-ಮತ ಭೇದವಿಲ್ಲದೆ ಭಾಗವಹಿಸಿ, ದೂರದ ಊರು ಶಿವಮೊಗ್ಗ, ವಿರಾಜ್ ಪೇಟೆ ಹಾಗೂ ನಮ್ಮೂರಿನ ಪ್ರತಿಭೆಗಳು ಈ ಸ್ಪರ್ಧೆಯಲ್ಲಿ ಬಹುಮಾನವನ್ನು ತಮ್ಮದಾಗಿಸಿಕೊಂಡಿರುವರು. ಸ್ಪರ್ಧೆಯಲ್ಲಿ ನ್ಯಾಯಯುತ ತೀರ್ಪು ನೀಡಿ ಸಹಕರಿಸಿದ ಯುವ ಸಾಹಿತಿ ಡಾ.ಅರುಣ್ ಉಳ್ಳಾಲ್ ಮತ್ತು ಶಿಕ್ಷಕಿ, ಸಾಹಿತಿ ವಿಜಯಲಕ್ಷ್ಮಿ ಕಟೀಲು ಹಾಗೂ ಸಾಹಿತಿ ರಮಾನಾಥ ಕೋಟೆಕಾರು ಇವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಹಲವು ವರ್ಷಗಳಿಂದ ಮಂದಿರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ ಪೂಜಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಿಸ್ವಾರ್ಥ ಸೇವೆಗೈಯ್ಯುತ್ತಿರುವ ಪುರುಷೋತ್ತಮ ಅಡ್ಕ, ಗೋಪಾಲ ಕೊಂಡಾಣ ಹಾಗೂ ಮಾಧವ ಪರ್ಯತ್ತೂರು ಇವರನ್ನು ಗುರುತಿಸಿ ವೇದಿಕೆಯಲ್ಲಿ ಗಣ್ಯರ ಸಮಕ್ಷಮದಲ್ಲಿ ಘಟಕದ ವತಿಯಿಂದ ಗೌರವಿಸಲಾಯಿತು. ಶ್ರೀಮತಿ ವತ್ಸಲಾ ರಘುರಾಮ್ ಶ್ರೀಮತಿ ವಿನುತ ಬಾಲಕೃಷ್ಣ ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಸುಂದರ ಸುವರ್ಣ ಸ್ವಾಗತಿಸಿ,ಪ್ರಾಸ್ತಾವಿಸಿದರು. ಕಾರ್ಯದರ್ಶಿ ಶಿರಲ್ ಕೊಲ್ಯ ವಂದಿಸಿದರು. ಸುಧಾ ಸುರೇಶ್ ಕೊಲ್ಯ,ಲತೀಶ್ ಎಂ.ಸಂಕೊಳಿಗೆ,ಸೌಮ್ಯ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!