Saturday, April 20, 2024
spot_imgspot_img
spot_imgspot_img

ನ. 13 ರಂದು ಭಾರತೀಯ ಮಜ್ದೂರ್ ಸಂಘ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ, ಕುಟುಂಬ ಮಿಲನ ಕಾರ್ಯಕ್ರಮ

- Advertisement -G L Acharya panikkar
- Advertisement -

ಇದೇ ಬರುವ ನವೆಂಬರ್‍ 13ರ ಆದಿತ್ಯವಾರ ಭಾರತೀಯ ಮಜ್ದೂರ್ ಸಂಘ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ, ಕುಟುಂಬ ಮಿಲನ ಕಾರ್ಯಕ್ರಮ. ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ, ಸಂಘ ನಿಕೇತನ ಮಂಗಳೂರಿನ ಮಣ್ಣಗುಡ್ಡದಲ್ಲಿ ನಡೆಯಲಿದೆ. ಎಂದು ಪ್ರಕಟಣೆಯಲ್ಲಿ ಆಯೋಜಕರು ತಿಳಿಸಿದ್ದಾರೆ.

ಕಾರ್ಮಿಕ ವರ್ಗದ ಸಂಘಟಿತ ಮತ್ತು ವಿಶೇಷವಾಗಿ ಅಸಂಘಟಿತ ವಿಭಾಗದಿಂದ ಸುಮಾರು 2,000 ಕಾರ್ಯಕರ್ತರ ಒಗ್ಗೂಡುವಿಕೆಯನ್ನು ನಿರೀಕ್ಷಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಂಸದರು ಮತ್ತು ಶಾಸಕರು, ಬಿ.ಎಂ.ಎಸ್ ರಾಷ್ಟ್ರಿಯ ನಾಯಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ..

ಭಾರತೀಯ ಮಜ್ದೂರ್ ಸಂಘವು ವಿಶ್ವದ ಅತಿ ದೊಡ್ಡ ರಾಷ್ಟ್ರೀಯವಾದಿ ಕಾರ್ಮಿಕ ಸಂಘಟನೆಯಾಗಿದೆ. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ವಲಯದಲ್ಲಿ ತನ್ನ ಹುಟ್ಟಿನಿಂದ ಇಂದಿನ ದಿನದವರೆಗೆ ಕೆಲಸದ ಪರಿಸರದಲ್ಲಿ ಕಾರ್ಮಿಕ ಸ್ನೇಹಿ ವಾತಾವರಣ, ಔದ್ಯೋಗಿಕ ಸಂಬಂಧಗಳನ್ನು ಕಟ್ಟಿಗೊಳಿಸಿ ಕಾರ್ಮಿಕ ಹಿತ ಕಾಯುವ ಕೆಲಸ ಕಾರ್ಯಗಳನ್ನು ನಿರಂತರ ಮಾಡುತ್ತಿದೆ. ಕಾರ್ಮಿಕ ವರ್ಗಕ್ಕೆ ಅನ್ಯಾಯವಾದಾಗ ಆಡಳಿತ ಮತ್ತು ಸರಕಾರದೊಂದಿಗೆ ಸಮಲೋಚಿಸಿ ಸೂಕ್ತ ಪರಿಹಾರವನ್ನು ಒದಗಿಸಿಕೊಟ್ಟಿದೆ. ಈ ಕೆಲಸ ಕಾರ್ಯಗಳನ್ನು ತಪಸ್ಸಿನಂತೆ ನಿರಂತರ ಮಾಡುತ್ತಾ ಕಾರ್ಮಿಕ ಹಿತಕ್ಕಾಗಿ ಸಮರ್ಪಿಸಿದ ಅಸಂಖ್ಯಾ ಕಾರ್ಯಕರ್ತರ ಪರಿಶ್ರಮದಿಂದ ಇಂದು ಜವಾಬ್ದಾರಿಯುತ ಕಾರ್ಮಿಕ ಸಂಘವಾಗಿ ಭಾರತೀಯ ಮಜ್ದೂರ್ ಸಂಘ (ಬಿ.ಎಂ.ಎಸ್) ಅಗ್ರಗಣ್ಯ ಸ್ಥಾನದಲ್ಲಿ ನೆಲೆ ನಿಂತಿದೆ.

ಈ ಕಾರ್ಯಕ್ರಮದಲ್ಲಿ ತಮ್ಮನ್ನು ಸಮರ್ಪಿಸಿಕೊಂಡ ಕಾರ್ಯಕರ್ತರ ಬಗ್ಗೆ ಅವರ ಕುಟುಂಬಕ್ಕೆ ಮಾಹಿತಿ ಕೊರತೆ ಇದೆ. ಕಾರ್ಮಿಕ ಹೊರಟದ ಕಾರ್ಯವೈಖರಿ, ಜವಾಬ್ದಾರಿ ಒಳಹೊರಗುಗಳ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಯಪಡಿಸಿ ಕಾರ್ಯಕರ್ತರ ಪಾತ್ರ, ಸಮಾಜಕ್ಕೆ ಅವರು ನೀಡುವ ಸೇವೆ ಕೊಡುಗೆಗಳನ್ನು ಅರ್ಥ ಮಾಡಿಸು ಪ್ರಯತ್ನವೇ ಕುಟುಂಬ ಮಿಲನ 2022.


ಈ ಕಾರ್ಯಕ್ರಮದಿಂದ ತನ್ನ ಮನೆಯಲ್ಲಿ ಕಾರ್ಯಕರ್ತರಿಗೆ ಗೌರವ, ಸಹಕಾರ ಸಿಗುತ್ತದೆ. ಬಿ.ಎಂ.ಎಸ್ ಪರಿಚಯ ಸಾಂಗತ್ಯ ಕುಟುಂಬಕ್ಕೂ ಸಿಗುತ್ತದೆ ಎಂಬ ನಿಟ್ಟಿನಲ್ಲಿ ಬಿ.ಎಂ.ಎಸ್. ಕುಟುಂಬ 2022 ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ. ಈ ಕಾರ್ಯಕ್ರಮವು ಬೆಳಗ್ಗೆ 10:00 ಗಂಟೆಯಿಂದ ಉಪಹಾರದೊಂದಿಗೆ ಆರಂಭವಾಗುತ್ತದೆ. ವಿವಿಧ ಕಾರ್ಯಕ್ರಮಗಳೊಂದಿಗೆ ಮಧ್ಯಾನ ಊಟದವರೆಗೂ ನಡೆಯುತ್ತದೆ.. ಬಿ.ಎಂ.ಎಸ್ ಸಂಘಟಿತ ಮತ್ತು ಅಸಂಘಟಿತ ಘಟಕದ ಎಲ್ಲಾ ಸದಸ್ಯರು ತಮ್ಮ ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಈ ಕುಟುಂಬ ಮಿಲನ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕಾಗಿ ವಿನಂತಿ.

ಈ ಕಾರ್ಯಕ್ರಮಕ್ಕೆ ಭಾಗವಹಿಸುವ ಕಾರ್ಮಿಕರಿಗೆ ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲದಿಂದ 13ನೇ ಆದಿತ್ಯವಾರ ಬೆಳಗ್ಗೆ 8 ಗಂಟೆಗೆ ಬಸ್ಸಿನ ವ್ಯವಸ್ಥೆಯು ಇದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿಟ್ಲ ಕಚೇರಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ.
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರುಗಡೆ ಕಟ್ಟಡ, ಅರವಿಂದ ಸೈಕಲ್ ಸ್ಟೋರ್ಸ್ ಹತ್ತಿರ.
ದೂರವಾಣಿ: 9900336599 ,9019500637

- Advertisement -

Related news

error: Content is protected !!