Friday, May 17, 2024
spot_imgspot_img
spot_imgspot_img

ಕೊಳ್ನಾಡು ಗ್ರಾಮ ಪಂಚಾಯತ್ ಗೆ ಗಾಂಧಿ ಪುರಸ್ಕಾರ ಸುಭಾಶ್ಚಂದ್ರ ಶೆಟ್ಟಿ ಅವಧಿ (2019-20)ಸಾಧನೆಗೆ ಸಿಕ್ಕ ಗೌರವ

- Advertisement -G L Acharya panikkar
- Advertisement -
vtv vitla

2019-20 ನೇ ಸಾಲಿನ ಅವಧಿಯ ಸಮಗ್ರ ಅಭಿವೃದ್ಧಿಗಾಗಿ ಸಾಧನೆಗಾಗಿ ಕರ್ನಾಟಕ ರಾಜ್ಯ ಸರಕಾರದ “ಗಾಂಧಿ ಪುರಸ್ಕಾರ” ಪ್ರಶಸ್ತಿಯನ್ನು ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮ ಪಂಚಾಯತ್ ಗೆ ಅಂದಿನ ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿದರು.

ಕೋವಿಡ್ ಸಂದರ್ಭದಲ್ಲಿ ಪ್ರಶಸ್ತಿ ಘೋಷಣೆಯಾಗಿದ್ದರು ಪ್ರಶಸ್ತಿ ನೀಡಿರಲಿಲ್ಲ, 5ಲಕ್ಷ ನಗದು ಹಾಗೂ ಪ್ರಶಸ್ತಿ ಒಳಗೊಂಡಿರುವ ಈ ಪುರಸ್ಕಾರಕ್ಕೆ ಕೊಳ್ನಾಡು ಗ್ರಾಮ ಪಂಚಾಯತ್ ಅಂದಿನ ಅಧ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವಧಿಯ ಸಾಧೆನೆಗಾಗಿ ಇದು ಎರಡನೆಯ ಬಾರಿ ಆಯ್ಕೆಯಾಗಿದೆ. ಇದಲ್ಲದೆ ಇವರ ಅವಧಿಯಲ್ಲಿ ರಾಷ್ಟ್ರೀಯ ನಿರ್ಮಲಾ ಪುರಸ್ಕಾರ, ನಮ್ಮ ಗ್ರಾಮ ನಮ್ಮ ಯೋಜನಾ ಪುರಸ್ಕಾರ 10 ಲಕ್ಷ ನಗದು ಹಾಗೂ ಜಿಲ್ಲಾ ಮಟ್ಟದ ಸಾಧನ ಪುರಸ್ಕಾರ ಪಡೆದಿರುವುದು ಇವರ ಕಾರ್ಯಕ್ಷಮತೆಗೆ ಸಿಕ್ಕ ಗೌರವವಾಗಿದೆ. ಸತತ 6 ಬಾರಿ ಚುನಾಯಿತರಾಗಿ 2 ಬಾರಿ ಅಧ್ಯಕ್ಷರಾಗಿ ಕೆಲಸ ಮಾಡಿದ ಇವರು ದ.ಕ ಪಂಚಾಯತ್ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಇವರ ಅವಧಿಯಲ್ಲಿ ಗ್ರಾಮ ಉದ್ಯೋಗ ಖಾತ್ರಿ ಯೋಜನಡಿಯಲ್ಲಿ ಸತತ 3 ಬಾರಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿ ಸಾಧನೆ ಮಾಡಿರುತ್ತದೆ ಮತ್ತು ಕೊಳ್ನಾಡು ಸಮಗ್ರ ಅಭಿವೃದ್ಧಿ ಹೊಂದಿದ ವಾರ್ಷಿಕ ಆದಾಯ 60ಲಕ್ಷ ಸ್ವಂತ ಆದಾಯವನ್ನು ಹೆಚ್ಚಿಸಲು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿರುವುದು ಈ ಗ್ರಾಮದ ಜನತೆ ಸಿಕ್ಕಿದ ಕೊಡುಗೆಯಾಗಿದೆ.

ಸದಾ ಗ್ರಾಮದ ಅಭಿವೃದ್ಧಿಯ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಮತ್ತು ಆಗಿನ ಪಂಚಾಯತ್ ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗಕ್ಕೆ, ಗ್ರಾಮದ ಜನತೆಯ ಪರವಾಗಿ ಅಭಿನಂದಿಸುತ್ತೇವೆ

ಮುಖ್ಯ ಮಂತ್ರಿ ಉದ್ಘಾಟನೆ ಮಾಡಿ ಸಾಂಕೇತಿಕ ವಿತರಣೆ ಮಾಡಿ ಉಳಿದ ಪ್ರಶಸ್ತಿಗಳನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರು ವಿತರಿಸಿದರು.

- Advertisement -

Related news

error: Content is protected !!