Saturday, April 27, 2024
spot_imgspot_img
spot_imgspot_img

ಗೃಹಿಣಿಯ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ವರದಕ್ಷಿಣೆ ಕಿರುಕುಳ ಆರೋಪ

- Advertisement -G L Acharya panikkar
- Advertisement -

ಮೈಸೂರು: ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕು ಹಿಮ್ಮಾವು ಗ್ರಾಮದಲ್ಲಿ ನಡೆದಿದೆ.

ಹಿಮ್ಮಾವು ಗ್ರಾಮದ ಉಮೇಶ್ ಎಂಬಾತನ ಪತ್ನಿ ಬೇಬಿ (29) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ. ಹತ್ತು ವರ್ಷಗಳ ಹಿಂದೆ ಉಮೇಶ್ ದಿಗೆ ಬೇಬಿ ಅವರ ಮದುವೆಯಾಗಿತ್ತು. ದಂಪತಿಗೆ 6 ವರ್ಷದ ಮಗ ಕೂಡ ಇದ್ದಾನೆ. ಮದುವೆಯಾದ ಪ್ರಾರಂಭದ ದಿನಗಳಲ್ಲಿ ದಂಪತಿ ಅನ್ನೋನ್ಯವಾಗಿದ್ದು, ಆದರೆ ನಂತರದ ದಿನಗಳಲ್ಲಿ ಪತಿ ಉಮೇಶ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ಪತಿಯ ವರ್ತನೆಗೆ ಬೇಸತ್ತಿದ್ದ ಬೇಬಿ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದರು. ಈ ನಡುವೆ ಪತಿ ಜಗಳವಾಡುತ್ತಿದ್ದು, ಇಂದು ಬೇಬಿ ನೇಣುಬಿಗಿದ ಸ್ಥಿತಿ ಪತ್ತೆಯಾಗಿದ್ದಾರೆ. ಮೃತದೇಹದ ಮೈಮೇಲೆ ಹಲ್ಲೆ ಮಾಡಿರುವ ಗುರುತುಗಳು ಕಾಣುತ್ತಿವೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದು, ಉಮೇಶ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲು ಮಾಡಿಕೊಳ್ಳಲಾಗಿದೆ.

- Advertisement -

Related news

error: Content is protected !!