Monday, May 6, 2024
spot_imgspot_img
spot_imgspot_img

ಚರ್ಚ್ ಪಾದ್ರಿಗೆ ಯುವತಿಯರ ಸಂಗ; ಖಾಸಗಿ ಕ್ಷಣಗಳ ವಿಡಿಯೋ ವೈರಲ್‌ ಬೆನ್ನಲ್ಲೇ ಕಾಮಾಂಧ ಪಾದ್ರಿಯ ಸ್ಪೋಟಕ ಅಂಶ ಬಯಲು..!

- Advertisement -G L Acharya panikkar
- Advertisement -

ಕನ್ಯಾಕುಮಾರಿ: ಮಹಿಳೆಯರೊಂದಿಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನ್ನಲ್ಲೇ ತಮಿಳುನಾಡಿನ ಕನ್ಯಾಕುಮಾರಿಯ ಸಿರೋ ಮಲಂಕರ ಕ್ಯಾಥೋಲಿಕ್ ಚರ್ಚ್‌ನ ಕ್ರೈಸ್ತ ಪಾದ್ರಿಯೊಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಂಧಿತ ಪಾದ್ರಿಯನ್ನು ಬೆನೆಡಿಕ್ಟ್ ಆಂಟೋ ಎಂದು ಗುರುತಿಸಲಾಗಿದೆ.

ಕೆಲವು ದಿನಗಳ ಹಿಂದೆ ಅವರ ಮೇಲೆ ಜನರ ಗುಂಪೊಂದು ಅಟ್ಯಾಕ್‌ ಮಾಡಿ ಅವರ ಲ್ಯಾಪ್‌ಟಾಪ್ ಅನ್ನು ಕಿತ್ತುಕೊಂಡಿದ್ದು, ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳನ್ನು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಡಿಯೋಗಳು ಮತ್ತು ಫೋಟೋಗಳು ವೈರಲ್‌ ಬಳಿಕ ಪಾದ್ರಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

30 ವರ್ಷದ ಕ್ರಿಶ್ಚಿಯನ್ ಪಾದ್ರಿ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಬಳಿಯ ಮಾರ್ತಾಂಡಂ ಮೂಲದವರಾಗಿದ್ದಾರೆ. ಹಲವು ವರ್ಷಗಳಿಂದ ಚರ್ಚ್‌ನಲ್ಲಿ ಪಾದ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಬೆನೆಡಿಕ್ಟ್ ಆಂಟೋ, ಮಹಿಳೆಯರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ವಿಡಿಯೋ ಕರೆ ಮಾಡಿ ಲೈಂಗಿಕ ಪ್ರಚೋದನೆ ನೀಡುತ್ತಿದ್ದ. ಅಲ್ಲದೆ, ಲೈಂಗಿಕ ಬಯಕೆ ತೀರಿಸಿಕೊಳ್ಳುವ ಮಹಿಳೆಯರೊಂದಿಗೆ ವಿಡಿಯೋಗಳನ್ನು ಸ್ವತಃ ರೆಕಾರ್ಡ್ ಮಾಡಿಕೊಂಡು ಸಂತ್ರಸ್ತರಿಗೆ ಬೆದರಿಕೆ ಹಾಕಲು ಈ ವಿಡಿಯೋಗಳನ್ನು ಬಳಸುತ್ತಿದ್ದ ಎಂದೂ ತಿಳಿದುಬಂದಿದೆ. ಅಲ್ಲದೆ, ಅಪ್ರಾಪ್ತ ಬಾಲಕಿಯರ ಜತೆಗೂ ಕಾಮ ತೃಷೆ ತೀರಿಸಿಕೊಂಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

Related news

error: Content is protected !!