- Advertisement -
- Advertisement -


ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಚಂದ್ರಕಟ್ಟೆ ಕೆರೆಯಲ್ಲಿ ನಡೆದಿದೆ. ಮೃತ ಬಾಲಕನನ್ನು ಸುಹಾಸ್ (12) ಎಂದು ಗುರುತಿಸಲಾಗಿದೆ.

ತಾತನ ಮನೆಯಲ್ಲಿ ಓದುತ್ತಿದ್ದ ಬಾಲಕ, ಇಬ್ಬರು ಸ್ನೇಹಿತರೊಂದಿಗೆ ಈಜಲು ತೆರಳಿದ್ದ. ಮಳೆ ಬಂದು ಕೆರೆ ಸಂಪೂರ್ಣ ತುಂಬಿದ್ದರೂ, ಈಜಲು ಇಳಿದ ಸುಹಾಸ್ ನೀರುಪಾಲಾಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ.



- Advertisement -








