Saturday, June 6, 2026
spot_imgspot_img
spot_imgspot_img

ಚಿತ್ರದುರ್ಗ: ಮುರುಘಾ ಮಠದ ಶ್ರೀಳಿಗೆ ಮತ್ತೊಂದು ಶಾಕ್; ಪೀಠತ್ಯಾಗದ ಚರ್ಚೆಗೆ ಮಹತ್ವದ ಸಭೆ

- Advertisement -
- Advertisement -

ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶ್ರೀಳಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಸೆ. 29 ರಂದು ಮುರುಘಾ ಶರಣರ ಪೀಠತ್ಯಾಗದ ಚರ್ಚೆಗೆ ವೀರಶೈವ ಸಮಾಜದ ಮುಖಂಡರು ಸಭೆ ಕರೆಯಲಾಗಿದೆ.

ಮುರುಘಾ ಶ್ರೀಗಳು ಪೀಠತ್ಯಾಗ ಮಾಡದೇ ಇರುವುದರಿಂದ ಶ್ರೀಮಠದ ದೈನಂದಿನ ಧಾರ್ಮಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ನಿರ್ವಹಣೆ ಸವಾಲು ಎದುರಾಗಿದ್ದು, ಈ ಕುರಿತು ಚರ್ಚಿಸಲು ಸೆ.29 ರಂದು ವೀರಶೈವ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ.

ಮಾಜಿ ಸಚಿವ ಹೆಚ್. ಏಕಾಂತಯ್ಯ ಅವರ ನೇತೃತ್ವದಲ್ಲಿ ಸಿಬಾರದ ಎಸ್ಸೆನ್ ಸ್ಮಾರಕದಲ್ಲಿ ಅಂದು ಬೆಳಗ್ಗೆ 11.30 ಕ್ಕೆ ಸಭೆ ಕರೆಯಲಾಗಿದ್ದು, ಸಭೆಯ ಕುರಿತು ಸಮಾಜದ ಮುಖಂಡರಿಗೆ ಪತ್ರವೊಂದನ್ನು ಕಳುಹಿಸಲಾಗಿದೆ.

vtv vitla
- Advertisement -

Related news

error: Content is protected !!