Friday, June 5, 2026
spot_imgspot_img
spot_imgspot_img

ಚಿರತೆ ದಾಳಿಗೆ ಮಹಿಳೆ ಬಲಿ

- Advertisement -
- Advertisement -

ಶಿವಮೊಗ್ಗ ತಾಲೂಕಿನ ಬಿಕ್ಕೋನ ಹಳ್ಳಿಯ ಯಶೋದಮ್ಮ ಎಂಬ 45 ವರ್ಷದ ಮಹಿಳೆ ಹೊಲದಲ್ಲಿ ಕಳೆ ತೆಗೆಯುವಾಗ ಚಿರತೆಯೊಂದು ದಾಳಿ ನಡೆಸಿದೆ. ಪರಿಣಾಮ ಚಿರತೆಯ ದಾಳಿಗೆ ಯಶೋದಮ್ಮ ಬಲಿಯಾಗಿದ್ದಾರೆ.

ಮೊದಲ ಬಾರಿಗೆ  ಚಿರತೆಯ ದಾಳಿಗೆ ಶಿವಮೊಗ್ಗದಲ್ಲಿ ಬಲಿಯಾಗಿದೆ. ಶಿವಮೊಗ್ಗದ ಬಿಕ್ಕೋನ ಹಳ್ಳಿ ಸರ್ವೆ ನಂಬರ್ 9 ರಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಕುತ್ತಿಗೆ ಭಾಗವೂ ಗಾಯಗೊಂಡಿದ್ದು, ಹಿಂಭಾಗದಲ್ಲಿ ತೀವ್ರ ತರವಾದ ದಾಳಿಗೆ ಒಳಗಾಗಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಮತ್ತು ಶಂಕರವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

- Advertisement -

Related news

error: Content is protected !!