- Advertisement -
- Advertisement -






ಕೇರಳ: ಓಣಂ ಹಬ್ಬದ ಹಿನ್ನೆಲೆ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಇಡ್ಲಿ ತಿನ್ನುವಾಗ ಇಡ್ಲಿ ಗಂಟಲಿಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೇರಳದ ಪಾಲಕ್ಕಾಡ್‌ನ ಕಂಜಿಕೋಡ್‌ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕಂಜಿಕೋಡ್‌ನ ಅಲಮರಮ್ ಮೂಲದ ಟ್ರಕ್ ಚಾಲಕ ಸುರೇಶ್ (50) ಎಂದು ಗುರುತಿಸಲಾಗಿದೆ.
ಕಾಂಜಿಕೋಡು ಸಮೀಪದ ಕೊಲ್ಲಾಪುರದಲ್ಲಿ ಯುವ ಸಮೂಹ ಸ್ಪರ್ಧೆ ಆಯೋಜಿಸಿತ್ತು. ಸುರೇಶ್ ಅವರು ಮೂರು ಇಡ್ಲಿಗಳನ್ನು ಒಟ್ಟಿಗೆ ತಿನ್ನಲು ಪ್ರಯತ್ನಿಸಿದ್ದಾರೆ. ಅದರೆ ಇಡ್ಲಿ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿದೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ.
ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -