Saturday, May 4, 2024
spot_imgspot_img
spot_imgspot_img

ಚೀನಾದ 54 ಆ್ಯಪ್​ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ..!

- Advertisement -G L Acharya panikkar
- Advertisement -

ಭಾರತದ ಭದ್ರತೆಗೆ ಹೆಚ್ಚಿನ ಅಪಾಯವನ್ನುಂಟು ಮಾಡುವ ಚೀನಾದ 54 ಮೊಬೈಲ್ ಆ್ಯಪ್​​ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 2020ರಲ್ಲಿ ಚೀನಾದ 118 ಮೊಬೈಲ್​ ಆ್ಯಪ್​​ಗಳ ಬಳಕೆಯನ್ನು ಭಾರತದಲ್ಲಿ ನಿಷೇಧಿಸಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೆ 54 ಆ್ಯಪ್​​ಗಳನ್ನು ನಿಷೇಧಿಸಲಿದೆ.

ಇದೀಗ ನಿಷೇಧಿಸಲ್ಪಟ್ಟ ಆ್ಯಪ್​​ಗಳಲ್ಲಿ, ಬ್ಯೂಟಿ ಕ್ಯಾಮರಾ, ಸ್ವೀಟ್​ ಸೆಲ್ಫೀ ಎಚ್​ಡಿ, ಬ್ಯೂಟಿ ಕ್ಯಾಮರಾ-ಸೆಲ್ಫಿ ಕ್ಯಾಮರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್ , ಕ್ಯಾಮ್ ಕಾರ್ಡ್ ಫಾರ್​ ಸೇಲ್ಸ್ ಫೋರ್ಸ್​ ಎಂಟ್​, ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್, ವಿವಾ ವಿಡಿಯೋ ಎಡಿಟರ್​, ಆ್ಯಪ್​ಲಾಕ್​, ಡ್ಯುಯೆಲ್​ ಸ್ಪೇಸ್​ ಲೈಟ್​, Tencent Xriver, Onmyoji Chess, Onmyoji Arena ಗಳು ಕೂಡ ಸೇರಿವೆ.

ಈ ಮೇಲಿನ ಪ್ರಮುಖ ಆ್ಯಪ್​ಗಳು ಸೇರಿ 54 ಚೀನಾದ ಮೊಬೈಲ್ ಅಪ್ಲಿಕೇಶನ್​​ಗಳನ್ನು ಭಾರತದಲ್ಲಿ ನಿರ್ಬಂಧಿಸುವಂತೆ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವಾಲಯ ಆ್ಯಪ್​ ಸ್ಟೋರ್​ ಮತ್ತು ಪ್ಲೇ ಸ್ಟೋರ್​​ಗಳಿಗೆ ಸೂಚನೆ ನೀಡಿದೆ. ಇವು ಭಾರತೀಯರ ಮಾಹಿತಿ ರಕ್ಷಣೆ ಸರಿಯಾಗಿ ಮಾಡುತ್ತಿಲ್ಲ. ಈ ಮೂಲಕ ಭಾರತೀಯರ ಭದ್ರತೆಗೆ ಧಕ್ಕೆ ತರುತ್ತಿವೆ. ಹಾಗಾಗಿ ಕೂಡಲೆ ಈ ಎಲ್ಲ ಆ್ಯಪ್​ಗಳನ್ನೂ ಭಾರತದಲ್ಲಿ ನಿಷೇಧಿಸಲಾಗುವುದು ಎಂದು ಕೇಂದ್ರ ಇಲಾಖೆ ಹೇಳಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!