Sunday, May 5, 2024
spot_imgspot_img
spot_imgspot_img

ಚುನಾವಣಾ ಹಿನ್ನಲೆ; ಪುತ್ತೂರಿನ ಐವರು ಸಹಿತ ದ.ಕ 11 ಜನರು ಗಡಿಪಾರು..!!

- Advertisement -G L Acharya panikkar
- Advertisement -
vtv vitla

ಪುತ್ತೂರು: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಪರಾಧ ಹಿನ್ನೆಲೆಯುಳ್ಳ 11 ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಇದರಲ್ಲಿ ಪುತ್ತೂರು ತಾಲೂಕಿನ ಐವರು ಸೇರಿದ್ದಾರೆ.

ಚುನಾವಣೆ ಸಂದರ್ಭ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಪರಾಧ ಹಿನ್ನಲೆವುಳ್ಳ 11 ಜನರನ್ನು ಗಡಿಪಾರು ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಮಾಡಿದ ಶಿಫಾರಸ್ಸಿನಂತೆ ಈ ಆದೇಶ ಹೊರಡಿಸಲಾಗಿದೆ. ಮಾರ್ಚ್ 6 ರಿಂದ ಆಗಸ್ಟ್ 6ರವರೆಗೆ ಈ ಗಡಿಪಾರು ಆದೇಶ ಜಾರಿಯಲ್ಲಿರುತ್ತದೆ.

ಬಂಟ್ವಾಳ ತಾಲೂಕಿನ ಗೋಳ್ತಮಜಲು ನಿವಾಸಿ ನಜೀರ್ ಕುಣಿಗಲ್, ಮಂಗಳೂರು ತಾಲೂಕು ಅರ್ಕುಳ ಗ್ರಾಮದ ಇಬ್ರಾಹಿಂ ಖಲೀಲ್, ಪುತ್ತೂರು ತಾಲೂಕು ಅನಿಲೆ ಮನೆ, ಜಯರಾಜ್‌ ರೈ, ಪುತ್ತೂರು ನೆಹರು ನಗರದ ಇಬ್ರಾಹಿಂ, ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಹಕೀಂ ಕೂರ್ನಡ್ಕ ಕಡಬ ತಾಲೂಕು ಕುದ್ಮಾರು ಗ್ರಾಮದ ರೋಷನ್, ಕಡಬ ತಾಲೂಕು ಸವಣೂರು ಗ್ರಾಮ ಇಡ್ಯಾಡಿ ನಿವಾಸಿ ಪ್ರಸಾದ್, ಪುತ್ತೂರು ತಾಲೂಕು ಕರವೇಲು ನಿವಾಸಿ ಅಬೂಬಕ್ಕರ್ ಸಿದ್ದಿಕ್, ಪುತ್ತೂರು ತಾಲೂಕು ಉಪ್ಪಿನಂಗಡಿ ನಿವಾಸಿ ಉಬೈದ್ ಬಿ.ಎಸ್, ಬೆಳ್ತಂಗಡಿ ತಾಲೂಕು ತಣ್ಣೀರುಪಂಥ ಗ್ರಾಮದ ತಫೀಂ ಹಾಗೂ ಬೆಳ್ತಂಗಡಿ ತಾಲೂಕು ಶಿಶಿಲದ ಕಿರಣ್ ಕುಮಾರ್ ಡಿ ಗಡಿ ಪಾರಾದವರು.

- Advertisement -

Related news

error: Content is protected !!