Saturday, June 6, 2026
spot_imgspot_img
spot_imgspot_img

ಮೂಲ್ಕಿ: ಶಿಬರೂರು ಮತ್ತು ಕಟೀಲು ನಡುವಿನ ಸಂಪರ್ಕ ಸೇತು ಮೂಡುಮಠ ಬಳಿಯ ಅಣೆಕಟ್ಟೆ ಕುಸಿತ…!!

- Advertisement -
- Advertisement -

ಮೂಲ್ಕಿ : 18 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಶಿಬರೂರು ಮತ್ತು ಕಟೀಲು ನಡುವಿನ ಸಂಪರ್ಕ ಸೇತುವಾಗಿದ್ದ ಮೂಡುಮಠ ಬಳಿಯ ಅಣೆಕಟ್ಟೆ ಶುಕ್ರವಾರ ತಡರಾತ್ರಿ ಕುಸಿದಿದ್ದು ಗ್ರಾಮಸ್ಥರ ಸಂಪರ್ಕ ಕಡಿತಗೊಂಡಿದೆ.

ಶಿಬರೂರಿನಿಂದ ಕಟೀಲಿಗೆ ನಡೆದುಕೊಂಡು ಬರಲು ಹತ್ತಿರವಾಗಿ ಈ ಸೇತುವೆ ಬಳಕೆಯಾಗುತ್ತಿತ್ತು. ಅಲ್ಲದೆ ನಂದಿನಿ ನದಿಯ ಉಪ್ಪು ನೀರಿಗೆ ತಡೆಗೋಡೆಯಾಗಿಯೂ ಕಾರ್ಯನಿರ್ವಹಿಸುತ್ತಿತ್ತು. ಘಟನಾ ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಪರಿಶೀಲಿಸಿ ಅಕ್ರಮ ಮರಳುಗಾರಿಕೆಯೇ ಅಣೆಕಟ್ಟು ಕುಸಿಯಲು ಕಾರಣ ಎಂದು ದೂರಿದರು.

ಎರಡು ತಿಂಗಳ ಹಿಂದೆ ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾಧಿಕಾರಿ, ಗಣಿ ಹಾಗೂ ಪೊಲೀಸ್ ಇಲಾಖೆಗೆ ವರದಿ ನೀಡಿದ್ದಾರೆ. ಆದರೂ ಮರಳುಗಾರಿಕೆ ನಡೆಯುತ್ತಿದೆ. ಆದ್ದರಿಂದ ಅಣೆಕಟ್ಟೆ ಕುಸಿತಕ್ಕೆ ಪೊಲೀಸ್ ಮತ್ತು ಗಣಿಗಾರಿಕೆ ಇಲಾಖೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದರು.

- Advertisement -

Related news

error: Content is protected !!