Friday, May 3, 2024
spot_imgspot_img
spot_imgspot_img

ಚೆಂಡೆವಾದನದಲ್ಲಿ ‘ಇಂಡಿಯಾಸ್ ವರ್ಲ್ಡ್ ರೆಕಾರ್ಡ್ಸ್’ ಪುಟ ಸೇರಿದ ಕೌಶಿಕ್ ರಾವ್ ಹೆಸರು

- Advertisement -G L Acharya panikkar
- Advertisement -

ಯಕ್ಷಗಾನ ಚೆಂಡೆಯಲ್ಲಿ ಒಂದು ನಿಮಿಷಕ್ಕೆ 192 ಬಾರಿ ತರಿಕಿಟತಕ ಎಂಬ ಏಕತಾಳದ ಉರುಳಿಕೆಯನ್ನು ನುಡಿಸುವ ಮೂಲಕ ಮೂಡುಬಿದಿರೆ ಪುತ್ತಿಗೆ ನಿವಾಸಿ ಕೌಶಿಕ್ ರಾವ್ ಟಿ.ಜೆ. ‘ಇಂಡಿಯಾಸ್ ವರ್ಲ್ಡ್ ರೆಕಾರ್ಡ್ಸ್’ ಪುಟ ಸೇರಿದ್ದಾರೆ.

ಯಕ್ಷಗಾನ ಪಕ್ಕವಾದ್ಯ ವಿಭಾಗದಲ್ಲಿ ಇದೇ ಮೊದಲಿಗೆ ಈ ಸಾಧನೆ ಸಾಧ್ಯವಾಗಿದೆ. ಚೆಂಡೆಯಲ್ಲಿ ತರಿಕಿಟತಕವನ್ನು 192 ಬಾರಿ (192X6=1152 ಬೀಟ್ಸ್) ಬಾರಿಸಿದ್ದ ವಿಡಿಯೋವನ್ನು ಜೆಮ್‌ಷೆಡ್‌ಪುರದಲ್ಲಿರುವ ಐಡಬ್ಲ್ಯುಆರ್ ಫೌಂಡೇಶನ್‌ಗೆ ಕಳುಹಿಸಲಾಗಿತ್ತು. ಅವರು ಈ ವಿಡಿಯೋದ ಸಾಚಾತನವನ್ನು ಪಕ್ಕವಾದ್ಯ ಸಾಧಕರ ಮೂಲಕ ಪರೀಕ್ಷಿಸಿದ್ದರು. ಇಬ್ಬರು ತೀರ್ಪುಗಾರರ ಪರಿಶೀಲನೆ ಬಳಿಕ ಅವರ ಶಿಫಾರಸು ಆಧರಿಸಿ ಮಾನ್ಯತೆ ನೀಡಲಾಗಿದೆ.

ಕೌಶಿಕ್ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ‘ಶ್ರೀ ಜ್ಞಾನಶಕ್ತಿ ಪಾವಂಜೆ ಮೇಳದ ಪ್ರಧಾನ ಚೆಂಡೆವಾದಕರು. ಅವರ ಪತ್ನಿ ಅಮೃತಾ ಅಡಿಗ ಹವ್ಯಾಸಿ ಭಾಗವತರು. “ಒಂದು ನಿಮಿಷದಲ್ಲಿ 192 ಬಾರಿ ಏಕತಾಳದ ಉರುಳಿಕೆ ನುಡಿಸುವುದು ಕಷ್ಟವಲ್ಲವಾದರೂ, ದಾಖಲೆಗೆ ಸೇರ್ಪಡೆ ಆಗಬೇಕಿದ್ದರೆ ಒಂದೇ ತಾಳವನ್ನು ಯಾವುದೇ ಅಕ್ಷರ ತಪ್ಪದಂತೆ ನುಡಿಸಬೇಕಿತ್ತು. ಯಕ್ಷಗಾನ, ಚೆಂಡೆ ವಾದನವನ್ನು ವಿಶ್ವಾದ್ಯಂತ ಪಸರಿಸುವ ಅಭಿಲಾಷೆ ಇದೆ. ಮುಂದೆ ವಿಶ್ವ ದಾಖಲೆ ಮಾಡುವ ಬಯಕೆ ಹೊಂದಿದ್ದೇನೆ” ಎಂಬುದು ಕೌಶಿಕ್ ರಾವ್ ಅವರ ಅಭಿಪ್ರಾಯ.

- Advertisement -

Related news

error: Content is protected !!