Monday, May 20, 2024
spot_imgspot_img
spot_imgspot_img

ಜನರು ಕೊರೊನಾ ನಿಯಮಗಳನ್ನು ಅನುಸರಿಸದಿದ್ದರೆ ಲಾಕ್‌ಡೌನ್‌ ಅನಿವಾರ್ಯ; ಸಿಎಂ ಬೊಮ್ಮಾಯಿ

- Advertisement -G L Acharya panikkar
- Advertisement -
suvarna gold

ಬೆಳಗಾವಿ: “ಜನರು ಸರ್ಕಾರದ ಮಾರ್ಗಸೂಚಿಗಳನ್ನುಅನುಸರಿಸಬೇಕು. ಜನರು ಸಹಕಾರ ನೀಡಿದರೆ ಲಾಕ್‌ಡೌನ್‌ ಮಾಡುವುದಿಲ್ಲ. ಒಂದು ವೇಳೆ ಜನರು ಕೊರೊನಾ ನಿಯಮಗಳನ್ನು ಅನುಸರಿಸದಿದ್ದರೆ ಲಾಕ್‌ಡೌನ್‌ ಮಾಡೋದು ಅನಿವಾರ್ಯ” ಎಂದು ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಳೆದ ಒಂದು ವಾರದಿಂದ ಕೊರೊನಾ ಪ್ರಕರಣಗಖ ಸಂಖ್ಯೆ ಏರಿಕೆಯಾಗುತ್ತಿದೆ. ಒಮಿಕ್ರಾನ್‌ ಪ್ರಕರಣಗಳು ಸಹ ಹೆಚ್ಚಳವಾಗಿವೆ. ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಹಾರಾಷ್ಟ್ರ ಹಾಗೂ ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ” ಎಂದಿದ್ದಾರೆ.

vtv vitla

“ರಾಜ್ಯದ ಮಂದಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕ ಜನರು ಕೊರೊನಾ ನಿಯಂತ್ರಣಕ್ಕೆ ಸಹಕಾರ ನೀಡಬೇಕು. ಜನರು ಕೊರೊನಾ ತಡೆಗೆ ಸಹಕರಿಸಿದರೆ ಲಾಕ್‌ಡೌನ್‌ ಮಾಡುವುದಿಲ್ಲ. ಕೊರೊನಾ ನಿಯಮಾವಳಿಗಳನ್ನು ಪಾಲಿಸದೇ ಇದ್ದರೆ ಲಾಕ್‌‌ಡೌನ್‌ ಮಾಡುವುದು ಅನಿವಾರ್ಯ. ಕೊರೊನಾ ನಿಯಮಗಳನ್ನು ಜನರು ಅನುಸರಿಸಿ” ಎಂದು ಮನವಿ ಮಾಡಿದ್ದಾರೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!