Sunday, May 19, 2024
spot_imgspot_img
spot_imgspot_img

ಜಿಲ್ಲಾಧಿಕಾರಿಗಳೇ ಕೊರೊನ ವೈರಸ್ ವಿರುದ್ಧ ಹೋರಾಟದ ಫೀಲ್ಡ್ ಕಮಾಂಡರ್​ಗಳು: ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾ ಸೋಂಕು ಇಡೀ ದೇಶವ್ಯಾಪಿಯಾಗಿ ಕಾಡುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ನಾನಾ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ನಲ್ಲಿ ರಾಜ್ಯದ 17 ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದರು. ಕೊರೊನಾ ಬಗ್ಗೆ ಸ್ಥಳೀಯ ಭಾಷೆಯಲ್ಲಿ ಮಾಹಿತಿ ನೀಡಿ. ಸ್ಥಳೀಯವಾಗಿ ಅರ್ಥವಾದರೆ ಅವರಿಗೆ ಧೈರ್ಯ ಬರುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ.

ಕೆಲವೊಂದು ಗೀತೆ, ಪದ್ಯ, ಕವಿತೆಗಳ ಮೂಲಕವೂ ಮಕ್ಕಳಲ್ಲಿ ಮನೋಸ್ಥೈರ್ಯ ತುಂಬಬಹುದೆಂದು ಕೇಳಿದ್ದೇನೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೊವಿಡ್ ಲಸಿಕೆ ಪೋಲಾಗದಂತೆ ನೋಡಿಕೊಳ್ಳಬೇಕು.1ವಯಲ್‌ನಿಂದ 10 ಜನರಿಗೆ ಲಸಿಕೆ ಹಾಕಬಹುದು. ಕೆಲವೊಂದು ಕಡೆ 11 ಜನರಿಗೆ ಲಸಿಕೆ ಹಾಕಿದ್ದಾರೆ. ಇದೇ ರೀತಿ ಲಸಿಕೆ ಪೋಲಾಗದಂತೆ ಗಮನಹರಿಸಬೇಕು ಎಂದೂ ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮೋದಿ ಸೂಚನೆ ನೀಡಿದರು.

ಯುದ್ಧಗಳಲ್ಲಿ ಫೀಲ್ಡ್ ಕಮಾಂಡರ್ ಸಮರದ ಸ್ವರೂಪ ಕೊಡುತ್ತಾರೆ. ಫೀಲ್ಡ್ ಕಮಾಂಡರ್‌ಗಳಂತೆ ನೀವು ಕೆಲಸ ಮಾಡಬೇಕು. ಜಿಲ್ಲಾಧಿಕಾರಿಗಳೇ ವೈರಸ್ ವಿರುದ್ಧದ ಹೋರಾಟದ ಫೀಲ್ಡ್ ಕಮಾಂಡರ್‌. ನಮ್ಮ ಅಸ್ತ್ರ ಲೋಕಲ್ ಕಂಟೇನ್ಮೆಂಟ್. ಕಾಳಸಂತೆಯಲ್ಲಿ ಔಷಧ ಮಾರಾಟದ ಬಗ್ಗೆ ಕ್ರಮ ಕೈಗೊಳ್ಳಿ. ಫೀಲ್ಡ್ ಕಮಾಂಡರ್‌ನಂತೆ ಇಡೀ ಜಿಲ್ಲೆ ಸಶಕ್ತೀಕರಣ ಮಾಡಿ.

ನೀತಿಗಳಲ್ಲಿ ಕೆಲವೊಂದು ಸುಧಾಕರಣೆ ಅಗತ್ಯ ಇರುತ್ತದೆ. ಏನು ಸುಧಾರಣೆಯಾಗಬೇಕೆಂದು ನಮಗೆ ತಿಳಿಸಿ. ನಿಮ್ಮ ಜಿಲ್ಲೆಯ ಕ್ರಮಗಳು ಬೇರೆ ಜಿಲ್ಲೆಗೂ ಮಾದರಿಯಾಗುತ್ತೆ ಎಂದು ಪ್ರಧಾನಿ ಮೋದಿ ಆಶಿಸಿದರು.

ಕೆಲವು ಜಿಲ್ಲೆಗಳಲ್ಲಿ ಕೊರೊನಾ ಕಡಿಮೆಯಾಗುತ್ತಿದೆ. ಕೊರೊನಾ ತುತ್ತತುದಿ ತಲುಪಿ ಈಗ ಕಡಿಮೆಯಾಗುತ್ತಿದೆ. ಕೊರೊನಾ ಕಡಿಮೆಯಾಗುತ್ತಿದ್ದರೂ ಎಚ್ಚರಿಕೆ ಅಗತ್ಯ. ಪ್ರತಿ ವ್ಯಕ್ತಿಯ ಜೀವರಕ್ಷಣೆಗಾಗಿ ನಮ್ಮ ಹೋರಾಟ. ನಿಮ್ಮ ಅನುಭವ, ಕುಶಲತೆಯಿಂದ ಕೊರೊನಾ ತಡೆಯುವಲ್ಲಿ ಸಹಾಯವಾಗುತ್ತದೆ ಎಂದು ಪ್ರಧಾನಿ ಮೋದಿ ಎಚ್ಚರಿಸಿದರು.

ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು, ಉಡುಪಿ, ಶಿವಮೊಗ್ಗ, ಹಾಸನ, ಉತ್ತರ ಕನ್ನಡ, ಬಳ್ಳಾರಿ, ಮೈಸೂರು, ತುಮಕೂರು, ಧಾರವಾಡ, ದಕ್ಷಿಣ ಕನ್ನಡ, ಕಲಬುರಗಿ, ರಾಯಚೂರು, ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಿದ್ದರು.

ಹೋಂ ಐಸೋಲೇಷನ್ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಪಾಟ್ನಾ ಅಧಿಕಾರಿ ಜೊತೆ ಹೆಚ್ಚು ಮಾತನಾಡಿದರು. ಕೊರೊನಾ ಎಚ್ಚರಿಕೆ ಅಂಶಗಳು ಹಿಂದಿ ಭಾಷೆಯಲ್ಲಿದೆಯೇ? ಸ್ಥಳಿಯರಿಗೆ ಅರ್ಥ ಆದ್ರೆ ಧೈರ್ಯ ಬರುತ್ತೆ. ಕೆಲವೊಂದ ಗೀತೆ, ಪದ್ಯಗಳು, ಕವಿತೆಗಳ ಮೂಲಕ ಮಕ್ಕಳಿಗೆ ಮನಸ್ಥೈರ್ಯ ತುಂಬಬಹುದು ಅಂತ ಕೇಳಿದ್ದೇನೆ. ಅದನ್ನು ಬಳಸಿಕೊಳ್ಳಿ ಎಂದು ಪಾಟ್ನಾ ಅಧಿಕಾರಿಗೆ ಸೂಚಿಸಿದರು.

ಕೊರೊನಾದಿಂದ ಕುಟುಂಬಸ್ಥರನ್ನು ಭೇಟಿ ಮಾಡದಂತಾಗಿದೆ. ನಿಮ್ಮ ಎಲ್ಲ ಪ್ರಯತ್ನವನ್ನು ಶ್ಲಾಘಿಸುತ್ತೇನೆ. ನಿಮ್ಮ ಜಿಲ್ಲೆಯ ಸವಾಲುಗಳನ್ನು ಅರ್ಥ ಮಾಡಿಕೊಂಡಿರುತ್ತೀರಿ. ನಿಮ್ಮ ಜಿಲ್ಲೆ ಕೊರೊನಾ ವಿರುದ್ಧ ಗೆದ್ದರೆ ದೇಶ ಗೆದ್ದಂತೆ. ನನ್ನ ಗ್ರಾಮವನ್ನು ಕೊರೊನಾ ಮುಕ್ತ ಮಾಡುತ್ತೇನೆಂದು ಸಂಕಲ್ಪ ಮಾಡಿಕೊಳ್ಳಿ. ದೇಶದ ಗ್ರಾಮಗಳ ಜನರೇ ಸಂಕಲ್ಪ ತೆಗೆದುಕೊಳ್ಳಬೇಕು. ನಿಮ್ಮ ಸಲಹೆ, ಅಭಿಪ್ರಾಯಗಳನ್ನು ಲಿಖಿತವಾಗಿ ತಿಳಿಸಿ ಎಂದು ಜಿಲ್ಲಾಧಿಕಾರಿಗಳ ಜತೆ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು. ಕೃಷಿ ಕ್ಷೇತ್ರಕ್ಕೆ ಯಾವುದೇ ಲಾಕ್‌ಡೌನ್ ಇಲ್ಲ. ಕೃಷಿ ಭೂಮಿಯಲ್ಲೂ ಭೌತಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಲಿ. ಇದು ಗ್ರಾಮಗಳ ಶಕ್ತಿಯಾಗಿದೆ ಎಂದ ಪ್ರಧಾನಿ ಮೋದಿ ಸೂಚಿಸಿದರು.

ಕೊರೊನಾ ನಿಯಂತ್ರಣಕ್ಕೆ ಜನಪ್ರತಿನಿಧಿಗಳ ಪಾತ್ರ ಮುಖ್ಯ ಎಂದು ಜಿಲ್ಲಾಧಿಕಾರಿಗಳ ಜತೆ ಸಭೆಯಲ್ಲಿ ತಿಳಿಸಿದ ಪ್ರಧಾನಿ ಮೋದಿ ಪಕ್ಷಭೇದ ಮರೆತು ಕೊರೊನಾ ಎದುರಿಸಲು ಒಂದಾಗಿ. ಇದಕ್ಕೆ ಜನಶಕ್ತಿ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಕೋವಿಡ್ ಕಂಟ್ರೋಲ್‌ಗೆ ಜನಪ್ರತಿನಿಧಿಗಳ ಪಾತ್ರ ಮುಖ್ಯ. ಪಕ್ಷ ಬೇಧ ಮರೆತು ಕೋವಿಡ್ ಯುದ್ದ ಎದುರಿಸಲು ಎಲ್ಲರೂ ಭಾಗಿಯಾಗಬೇಕು.

ಪಿಎಂ ಕೇರ್ಸ್ ಫಂಡ್‌ನಿಂದ ದೇಶದ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಿ. ಲಸಿಕೆ ನೀಡಿಕೆ ಶೆಡ್ಯೂಲ್ 15 ದಿನ ಮುಂಚಿತವಾಗಿ ರಾಜ್ಯಗಳಿಗೆ ತಿಳಿಸಲು ಸೂಚನೆ. ಕೊವಿಡ್ ಲಸಿಕೆ ಪೋಲಾಗದಂತೆ ತಡೆಯಬೇಕು. ಆಸ್ಪತ್ರೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತವಾಗದಂತೆ ನೋಡಿಕೊಳ್ಳಿ. ದೇಶವನ್ನು ಈ ಸಂಕಷ್ಟದಿಂದ ಹೊರಗೆ ತರಬೇಕೆಂಬುದು ನನ್ನ ಸೂಚನೆ.

ನಿಮ್ಮೀ ಅನುಭವ ಭವಿಷ್ಯದಲ್ಲೂ ಕೂಡ ಸಹಾಯಕ್ಕೆ ಬರುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ನಿಮ್ಮ ಕುಟುಂಬಸ್ಥರ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದರು.

driving
- Advertisement -

Related news

error: Content is protected !!