Monday, May 13, 2024
spot_imgspot_img
spot_imgspot_img

ಜೆಸಿಬಿ ಡ್ರೈವರ್, ಅನಾಥ ಎಂದು ಪರಿಚಯಿಸಿಕೊಂಡು28 ವರ್ಷಕ್ಕೆ 24 ಮಹಿಳೆಯರನ್ನ ಕಟ್ಟಿಕೊಂಡ ಭೂಪ

- Advertisement -G L Acharya panikkar
- Advertisement -
astr

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಯುವಕನೊಬ್ಬ ಅಪರಿಚಿತ ಮಹಿಳೆಯನ್ನು ನಂಬಿಸಿ ತನ್ನೊಂದಿಗೆ ಮದುವೆಯಾದ ಕೆಲವೇ ದಿನಗಳಲ್ಲಿ ಚಿನ್ನಾಭರಣಗಳು ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುತ್ತಿದ್ದ. ಹೀಗೆ ಇದುವರೆಗೆ 24 ಮಹಿಳೆಯರನ್ನು ವಂಚಕ ಮದುವೆಯಾಗಿರುವುದು ಬೆಳಕಿಗೆ ಬಂದಿದೆ.

ಮುರ್ಶಿದಾಬಾದ್ ಜಿಲ್ಲೆಯಲ್ಲಿ ಆರೋಪಿ ಅಸಾಬುಲ್ ಮೊಲ್ಲಾ ಎಂಬಾತನೇ 24 ಮಹಿಳೆಯರನ್ನು ಮದುವೆಯಾದ ಭೂಪ. ಪೊಲೀಸರ ತನಿಖೆಯಲ್ಲಿ ಈ ಎಲ್ಲ ಅಂಶಗಳು ಗೊತ್ತಾಗಿ ಖಾಕಿ ಪಡೆ ಬೇಸ್ತು ಬಿದ್ದಿದೆ.

ಮಹಿಳೆಯೊಬ್ಬರು ನೀಡಿದ ದೂರಿನ ಮೇಲೆ ಸಾಗರದಿಘಿ ಠಾಣೆಯ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಈತನ ವಿಚಾರಣೆ ವೇಳೆ ಅನೇಕ ಅಚ್ಚರಿಯ ಅಂಶಗಳು ಬಯಲಾಗಿವೆ. ಈತನ ವಯಸ್ಸು 28.

ಆರೋಪಿಯು ರಸ್ತೆ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗಾಗಿ ಕೆಲಸ ಅರಸಿ ವಿವಿಧ ಪ್ರದೇಶಗಳಿಗೆ ತೆರಳಿದ್ದ. ಅಲ್ಲಿ ಕೆಲವೊಮ್ಮೆ ತನ್ನನ್ನು ತಾನು ಜೆಸಿಬಿ ಡ್ರೈವರ್ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಕೆಲವೊಮ್ಮೆ ತಾನು ಅನಾಥ ಎಂದೂ ಹೇಳಿಕೊಳ್ಳುತ್ತಿದ್ದ. ಹೀಗೆ ಅಪರಿಚಿತ ಮಹಿಳೆಯರ ಸ್ನೇಹ ಬೆಳೆಸಿ, ಅವರನ್ನು ನಂಬಿಸಿ ಮದುವೆಯಾಗುತ್ತಿದ್ದ. ಅಲ್ಲದೇ, ಮಹಿಳೆಯರನ್ನು ನಂಬಿಸಲೆಂದೇ ನಕಲಿ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ ಬೇರೆ ಬೇರೆ ಪ್ರದೇಶಗಳಲ್ಲಿ ಮದುವೆಯಾಗುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮದುವೆಯಾದ ನಂತರ ಮಹಿಳೆಯರ ಚಿನ್ನಾಭರಣಗಳನ್ನು ಕದಿಯುವುದು ಮತ್ತು ನಂತರ ಕೆಲವು ವಾರಗಳ ಮನೆಯಿಂದ ಪರಾರಿಯಾಗುವುದೇ ಆರೋಪಿಯು ಮುಖ್ಯ ಗುರಿಯಾಗಿತ್ತು. ಮನೆಯಿಂದ ಹೋದ ನಂತರ ತನ್ನ ಮೊಬೈಲ್ ಟವರ್ ಲೊಕೇಶನ್ ಮೂಲಕ ಪತ್ತೆಹಚ್ಚುವುದನ್ನು ತಪ್ಪಿಸಲು ಬೇರೆ ಬೇರೆ ಸ್ಥಳಗಳಿಗೆ ತನ್ನ ಮೊಕ್ಕಾಂ ಬದಲಾಯಿಸುತ್ತಿದ್ದ. ಜೊತೆಗೆ ಹಲವು ದಿನಗಳ ಫೋನ್ ಬಂದ್​ ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸ್​ ಮೂಲಗಳಿಂದ ತಿಳಿದು ಬಂದಿದೆ.

ಇಷ್ಟೇ ಅಲ್ಲ, ಆರೋಪಿಯ ವಿಚಾರಣೆಯಲ್ಲಿ ಪೊಲೀಸರಿಗೆ ಮತ್ತೊಂದು ಅಚ್ಚರಿ ಅಂಶ ಕೂಡ ಬೆಳಕಿಗೆ ಬಂದಿದೆ. ಆರೋಪಿಯು ಪಶ್ಚಿಮ ಬಂಗಾಳವಲ್ಲದೇ ಬಿಹಾರದಲ್ಲೂ ವಿವಾಹವಾಗಿರುವುದು ಗೊತ್ತಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

vtv vitla
- Advertisement -

Related news

error: Content is protected !!