Friday, April 26, 2024
spot_imgspot_img
spot_imgspot_img

ಮಂಗಳೂರು: ಚಾರ್ಜ್‌ಗೆ ಇಟ್ಟಿದ್ದ ಇಲೆಕ್ಟ್ರಿಕಲ್ ಸ್ಕೂಟರ್‌ ಬೆಂಕಿಗಾಹುತಿ

- Advertisement -G L Acharya panikkar
- Advertisement -

ಮಂಗಳೂರು: ಚಾರ್ಜ್‌ಗೆ ಇಟ್ಟಿದ್ದ ಇಲೆಕ್ಟ್ರಿಕಲ್ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ನಗರದ ಬೋಂದೆಲ್ ಸಮೀಪದ ಕೆ.ಎಚ್. ಕಾಲನಿಯಲ್ಲಿ ಭಾನುವಾರ ನಡೆದಿದೆ.

ಸ್ಕೂಟರ್‌ನ್ನು ಅದರ ಮಾಲಕ ಚಾರ್ಜ್‌ಗೆ ಇಟ್ಟಿದ್ದರು. ಆದರೆ ಚಾರ್ಜ್‌ಗೆ ಇರಿಸಿದ ಕೆಲವೇ ಗಂಟೆಯಲ್ಲಿ ಸ್ಕೂಟರ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡ ತತ್‌ಕ್ಷಣ ಸ್ಕೂಟರ್‌ ಸ್ಪೋಟಗೊಂಡಿದೆ. ಸ್ಕೂಟರ್‌ನ ಯಂತ್ರಗಳು, ಬಿಡಿಭಾಗಗಳು ಸೇರಿದಂತೆ ಸಂಪೂರ್ಣ ಸ್ಕೂಟರ್‌ ಸುಟ್ಟು ಕರಕಲಾಗಿದೆ.

ಮಾಹಿತಿ ತಿಳಿದ ಅಗ್ನಿಶಾಮಕ ದಳ ತತ್‌ಕ್ಷಣ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವ ಕೆಲಸವನ್ನು ಮಾಡಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

- Advertisement -

Related news

error: Content is protected !!