Saturday, April 27, 2024
spot_imgspot_img
spot_imgspot_img

ಜ್ವರವೆಂದು ಆಸ್ಪತ್ರೆಗೆ ಅಡ್ಮಿಟ್ ಆದ ಯುವಕ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದ ಕುಟುಂಬ

- Advertisement -G L Acharya panikkar
- Advertisement -

ಬೆಂಗಳೂರು: ಜ್ವರ ಎಂದು ಆಸ್ಪತ್ರೆಗೆ ಅಡ್ಮಿಟ್ ಆದ ಯುವಕ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದ ಕುಟುಂಬಸ್ಥರರು ಆರೋಪಿಸಿದ್ದಾರೆ.

ರಾಮಮೂರ್ತಿ ನಗರದ ನಿವಾಸಿ ವಿಜೇತ್ (24) ಮೃತಪಟ್ಟ ದುರ್ದೈವಿ.

ಓದು ಮುಗಿಸಿ ಕೆಲಸಕ್ಕೆ ಸೇರಿ ಒಂದು ತಿಂಗಳಾಗಿದೆ ಅಷ್ಟೇ. ವಿಜೇತ್‌ಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಮನೆಯ ಸಮೀಪದ ಕ್ಲಿನಿಕ್‌ಗೆ ತೆರಳಿ ಇಂಜೆಕ್ಷನ್ ಪಡೆದು ಮನೆಗೆ ವಾಪಸ್‌ ಆಗಿದ್ದರು. ಆದರೆ ಮಾರನೇ ದಿನ ಸೆಪ್ಟಿಕ್ ಆಗಿದ್ದರಿಂದ ರಾಮಮೂರ್ತಿನಗರದ ಕೋಶಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು ವಿಜೇತ್‌ಗೆ ಸರ್ಜರಿ ಆಗಬೇಕು ಎಂದು ತಿಳಿಸಿದ್ದಾರೆ. ಆದರೆ ಸರ್ಜರಿ ವೇಳೆ ತೀವ್ರ ರಕ್ತಸ್ರಾವ ಆಗಿದ್ದು, ರಕ್ತ ತರುವಂತೆ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ರಕ್ತ ಕೊಡುವ ಪ್ರಕ್ರಿಯೆ ವೇಳೆ ಯುವಕನಿಗೆ ಹೃದಯ ಸ್ತಂಭನವಾಗಿದ್ದು, ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದರಿಂದ ಆಘಾತಕ್ಕೆ ಒಳಗಾದ ವಿಜೇತ್‌ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಮೃತಪಟ್ಟಿರುವುದಾಗಿ ಕಿಡಿಕಾರಿದ್ದಾರೆ.

- Advertisement -

Related news

error: Content is protected !!