Friday, May 3, 2024
spot_imgspot_img
spot_imgspot_img

ಟಿ20 ವಿಶ್ವಕಪ್​ ಫೈನಲ್ ಕದನ; ಇಂಗ್ಲೆಂಡ್‌ಗೆ 138 ರನ್‌ಗಳ ಟಾರ್ಗೆಟ್‌ ನೀಡಿದ ಬಾಬರ್ ಪಡೆ

- Advertisement -G L Acharya panikkar
- Advertisement -

ಟಿ20 ವಿಶ್ವಕಪ್​ 2022ರಫೈನಲ್ ಕದನದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಪ್ರಶಸ್ತಿಗಾಗಿ ಕಾದಾಡುತ್ತಿವೆ. ಈಗಾಗಲೇ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದರಿಂದ ಮೆಲ್ಬೋರ್ನ್​ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸುವ ಮೂಲಕ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 138 ರನ್​ಗಳ ಸಾಧಾರಣ ಮೊತ್ತದ ಟಾರ್ಗೆಟ್ ನೀಡಿದೆ.

ಬ್ಯಾಟಿಂಗ್​ನಲ್ಲಿ ಅಬ್ಬರಿಸದ ಪಾಕ್:
ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಇನ್ನು, ಪಾಕಿಸ್ತಾನ ಪರ ಮಹತ್ವದ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಬೇಗ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಮೊಹಮ್ಮದ್ ರಿಜ್ವಾನ್ 15 ರನ್, ಬಾಬರ್ ಅಜಮ್ 32 ರನ್, ಮೊಹಮ್ಮದ್ ಹ್ಯಾರಿಸ್ 8 ರನ್, ಶಾನ್ ಮಸೂದ್ 38 ರನ್, ಇಫ್ತಿಕರ್ ಅಹ್ಮದ್ ಶೂನ್ಯ, ಶಾದಾಬ್ ಖಾನ್ 20 ರನ್, ಮೊಹಮ್ಮದ್ ನವಾಜ್ 5 ರನ್, ಮೊಹಮ್ಮದ್ ವಾಸಿಂ 4 ರನ್, ಶಾಹೀನ್ ಶಾ ಆಫ್ರಿದಿ 5 ರನ್ ಮತ್ತು ಹ್ಯಾರಿಸ್ ರೌಫ್ 1 ರನ್ ಗಳಿಸಿ ಔಟಾಗದೇ ಉಳಿದರು.

- Advertisement -

Related news

error: Content is protected !!