Monday, April 29, 2024
spot_imgspot_img
spot_imgspot_img

ಟೆಕ್ಕಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್!

- Advertisement -G L Acharya panikkar
- Advertisement -
driving

ಬೆಂಗಳೂರು: ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ವೊಂದು ಬೆಂಗಳೂರಿನಲ್ಲಿ ಖಾಕಿ ಬಲೆಗೆ ಬಿದ್ದಿದ್ದು, ಸಂಬಂಧ ಐವರು ಮೈಕೋ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಗಾರೆಪಾಳ್ಯ ನಿವಾಸಿಯನ್ನು ಈ ಗ್ಯಾಂಗ್ ಹನಿಟ್ರ್ಯಾಪ್ ಮಾಡಿತ್ತು. ಟೆಕ್ಕಿಯೋರ್ವನ ಬಳಿ ಕಾರು, ಮೊಬೈಲ್, ಹಣ ಸುಲಿಗೆ ಮಾಡಿತ್ತು. ಟೆಕ್ಕಿ, ಸೂಪರ್ ಮಾರ್ಕೆಟ್​ಗೆ ತರಕಾರಿ ತರಲು ಹೋಗಿದ್ದಾಗ ಗ್ಯಾಂಗ್​ನ ಮಹಿಳೆ ಟೆಕ್ಕಿಗೆ ಪರಿಚಯವಾಗಿದ್ದು, ಆ ಬಳಿಕ ಕುಟುಂಬಸ್ಥರನ್ನು ಪರಿಚಯಿಸಲು ಮಹಿಳೆ ಕರೆದೊಯ್ದಿದ್ದಳು.

ಟೆಕ್ಕಿಯನ್ನು ಮನೆಗೆ ಕರೆದೊಯ್ದಿದ್ದ ಆರೋಪಿ ಮಹಿಳೆ, ಬಳಿಕ ಟೆಕ್ಕಿ ಮನೆಯ ರೂಮ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಯೋಜನೆಯಂತೆ ಮನೆಗೆ ನುಗ್ಗಿದ ನಾಲ್ವರು ಆರೋಪಿಗಳು ರೂಮ್​​ನಲ್ಲಿದ್ದ ಟೆಕ್ಕಿ ಫೋಟೋ ತೆಗೆದು ಬ್ಲ್ಯಾಕ್​ಮೇಲ್ ಮಾಡಲು ತೊಡಗಿದ್ದರು. 10 ಲಕ್ಷ ರೂಪಾಯಿ ನೀಡುವಂತೆ ಯುವಕರು ಧಮ್ಕಿ ಹಾಕಿದ್ದರು.

ಹಣ ನೀಡಲು ಒಪ್ಪದಿದ್ದ ವೇಳೆ ಗ್ಯಾಂಗ್​ ಸುಲಿಗೆ ಮಾಡಿತ್ತು. ಟೆಕ್ಕಿ ಬಳಿ ಇದ್ದ ಐಷಾರಾಮಿ ಕಾರು, 37 ಸಾವಿರ ನಗದು ಹಾಗೂ ಮೊಬೈಲ್​​ ಕಿತ್ತುಕೊಂಡು ಆರೋಪಿಗಳ ಗ್ಯಾಂಗ್ ಪರಾರಿಯಾಗಿತ್ತು. ಈ ಬಗ್ಗೆ ಟೆಕ್ಕಿ ಮೈಕೋ ಲೇಔಟ್ ಠಾಣೆಗೆ ದೂರು ನೀಡಿದ್ದರು. ಇದೀಗ ಹನಿಟ್ರ್ಯಾಪ್ ಗ್ಯಾಂಗ್ ಖಾಕಿ ಬಲೆಗೆ ಬಿದ್ದಿದೆ.

- Advertisement -

Related news

error: Content is protected !!