Thursday, May 2, 2024
spot_imgspot_img
spot_imgspot_img

ಟ್ಯಾಂಕರ್ ಢಿಕ್ಕಿ – 48 ವಾಹನಗಳು ಜಖಂ, 30 ಮಂದಿಗೆ ಗಾಯ

- Advertisement -G L Acharya panikkar
- Advertisement -

ಪುಣೆ: 48 ವಾಹನಗಳಿಗೆ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ 30 ಮಂದಿ ಗಾಯಗೊಂಡು ವಾಹನಗಳು ಜಖಂಗೊಂಡಿರುವ ಘಟನೆ ನವಲೆ ಸೇತುವೆ ಬಳಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಟ್ಯಾಂಕರ್‌ನ ಬ್ರೇಕ್ ವೈಫಲ್ಯದಿಂದಾಗಿ ಅದು ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದ್ದು, ಟ್ಯಾಂಕರ್ ನಿಂದ ರಸ್ತೆಗೆ ತೈಲ ಸೋರಿಕೆಯಾಗಿ ಹಲವು ವಾಹನಗಳು ಅಪಘಾತಕ್ಕೀಡಾದವು ಎನ್ನಲಾಗಿದೆ.

ಘಟನೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ವಾಹನಗಳು ಸಾಲುಗಟ್ಟಿದ್ದವು ಎಂದು ಹೇಳಲಾಗಿದೆ.

- Advertisement -

Related news

error: Content is protected !!