Tuesday, May 21, 2024
spot_imgspot_img
spot_imgspot_img

ಡಿಜಿಟಲ್‌‌ ಕರೆನ್ಸಿಯು ರೂಪ ಬೇರೆ, ಮೌಲ್ಯ ಒಂದೇ-ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ಸದ್ಯದಲ್ಲೇ ಭಾರತಿಯ ರಿಸರ್ವ್ ಬ್ಯಾಂಕ್ ದೇಶದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಹಣದ ವರ್ಚುವಲ್‌ ರೂಪದಲ್ಲಿಯೇ ಡಿಜಿಟಲ್‌‌ ಕರೆನ್ಸಿಯು ಆಧಾರಿತ ಬ್ಲಾಕ್‌ಚೈನ್‌ ಹೊರತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

vtv vitla
vtv vitla

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ 2022-23ರ ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿ ಇಂದು ಪ್ರಧಾನಿ ಮೋದಿ ಮಾತನಾಡಿದರು. ಕ್ರಿಪ್ಟೊಕರೆನ್ಸಿಗಳು, ಬ್ಲಾಕ್‌ಚೈನ್‌ ತಂತ್ರಜ್ಞಾನ ಬಳಸುತ್ತಿರುವ ನಾನ್‌ ಫಂಜಿಬಲ್‌ ಟೋಕನ್‌ಗಳು ಹಾಗೂ ಇತರೆ ಡಿಜಿಟಲ್‌ ಸ್ವತ್ತುಗಳ ವಹಿವಾಟು ಇನ್ನು ಮುಂದೆ ಹೆಚ್ಚುವ ಮೂಲಕ ಹಣಕಾಸು ಸ್ಥಿತಿ-ಗತಿಯಲ್ಲಿ ಉತ್ತಮ ಬದಲಾವಣೆ ಎದುರಾಗಿರುವ ಬೆನ್ನಲ್ಲೇ ದೇಶವು ಡಿಜಿಟಲ್‌ ಕರೆನ್ಸಿಯನ್ನು ಬಿಡುಗಡೆ ಮಾಡಲು ಮುಂದಾಗಿರುವುದಾಗಿ ಹೇಳಿದರು.

ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಪ್ರಶಸ್ತ್ಯವನ್ನು ಡಿಜಿಟಲ್‌ ಕರೆನ್ಸಿಗಳಿಗೆ ನೀಡಲಾಗಿದ್ದು, ಇನ್ನು ಮುಂದೆ ರೂಪಾಯಿಯ ನೋಟುಗಳ ರೂಪದ ಕರೆನ್ಸಿಯನ್ನು ನಿಯಂತ್ರಿಸುವ ಆರ್‌ಬಿಐ, ಡಿಜಿಟಲ್‌ ಕರೆನ್ಸಿಯ ಮೇಲೂ ನಿಗಾ ವಹಿಸಲಿದೆ ಎಂದು ಹೇಳಿದರು.

vtv vitla
vtv vitla
- Advertisement -

Related news

error: Content is protected !!