Saturday, April 20, 2024
spot_imgspot_img
spot_imgspot_img

ಮರಳು ಕಲಾವಿದನ ಕೈಚಳಕದಲ್ಲಿ ಮೂಡಿದ ವಿಶ್ವದ ಮೊದಲ ಚಿಪ್ಪಿನ ಗಣಪ

- Advertisement -G L Acharya panikkar
- Advertisement -

ನಾಡು ನುಡಿ ಎಂದು ಬಂದಾಗ ಅಲ್ಲಿ ಕಲೆ ಸಂಸ್ಕೃತಿ ಇದ್ದೆ ಇರುತ್ತೆ. ಅದೇ ರೀತಿ ಆ ಕಲೆ ಎಲ್ಲರಲ್ಲು ಬರೋದಿಲ್ಲಾ. ಅಪರೂಪದಲ್ಲಿ ಅಪರೂಪದ ವ್ಯಕ್ತಿಗಳಲ್ಲಿ ಮಾತ್ರ ಆ ಕಲೆ ಇರುವಂಥದ್ದು. ಇನ್ನು ಎಲ್ಲರಿಗೂ ಕಿರು ಪರಿಚಿತ ಸುದರ್ಶನ್ ಪಾಟ್ನಾಯಕ್.. ಅವರಲ್ಲಿರೋ ಕಲೆಯಿಂದಲೇ ಇಂದು ವಿಶ್ವದಲ್ಲೇ ಖ್ಯಾತಿಯನ್ನ ಪಡೆದುಕೊಂಡಿದ್ದಾರೆ. ಹಲವು ಕಲಾಕೃತಿಗಳ ಮೂಲಕ ಹೆಸರುವಾಸಿಯಾಗಿದ್ದ ಸುದರ್ಶನ್, ಗಣಪತಿ ಹಬ್ಬದಂದೂ ವಿಶೇಷವಾದ ಕಲಾಕೃತಿಯನ್ನ ಮಾಡಿ ಮತ್ತೊಮ್ಮೆ ಖ್ಯಾತಿ ಪಡೆದಿದ್ದಾರೆ.

ಗಣಪತಿ ಬಪ್ಪಾ ಮೊರಿಯಾ. ನಾಡಿನಾದ್ಯಂತ ಗಣೇಶ ಹಬ್ಬದ ಸಂಭ್ರಮ.. ಕಳೆದ ವರ್ಷ ಕೊರೊನಾ ಇದ್ದ ಕಾರಣ ಗಣೇಶ ಹಬ್ಬಕ್ಕೆ ಅನುಮತಿ ಸಿಕ್ಕಿರಲಿಲ್ಲ, ಕೇವಲ ಮನೆಯಲ್ಲಿ ಮಾತ್ರ ಆಚರಣೆ ಮಾಡಿಕೊಳ್ಳಬೇಕಿತ್ತು, ಆದ್ರೆ ಈ ಬಾರಿ ಮೂರನೇ ಅಲೆಯ ಆತಂಕ ಇದ್ರು ಕೂಡ ಆಚರಣೆಗೆ ಕೆಲ ರಾಜ್ಯಗಳು ಅವಕಾಶ ನೀಡಿದೆ. ಸರಳವಾಗಿ ಆದ್ರೂ ಈ ಬಾರಿ ಗಣಪತಿ ಬಪ್ಪಾ ಮೊರಿಯಾ ಅನ್ನೋ ಕೂಗು ದೇಶಾದ್ಯಂತ ಕೇಳಿಸಿದೆ. ಇದರ ನಡುವೆ ಅದೊಂದು ಗಣಪತಿ ಮಾತ್ರ ನೋಡುಗರ ಕಣ್ಮನ ಸೆಳೆದಿದೆ.

ಒಡಿಶಾದಲ್ಲಿ ನಿರ್ಮಾಣ ಮಾಡಲಾಗಿರೋ ಚಿಪ್ಪಿನ ಗಣಪತಿ. ಸಮುದ್ರದ ದಡದಲ್ಲಿರೋ ಮರಳಿನ ಮೇಲೆ ಮೂಡಿಬಂದಿರೋ ಈ ಗಣಪ ನೋಡುಗರನ್ನ ಆಶ್ಚರ್ಯಚಕಿತಗೊಳಿಸುತ್ತೆ. ಏನಿದು ಚಿಪ್ಪಿನ ಗಣೇಶ ಅಂತಾ ನೀವು ಅಂದುಕೊಳ್ಳುತ್ತಿರಬಹುದು. ಅದು ಸಮುದ್ರದ ದಡದಲ್ಲಿ ಬಿದ್ದಿರೋ ಚಿಪ್ಪೆಗಳನ್ನ ಆಯ್ದು ಅದ್ರಲ್ಲಿ ಈ ಗಣೇಶನನ್ನ ನಿರ್ಮಾಣ ಮಾಡಲಾಗಿದೆ.

7000 ಚಿಪ್ಪು ಬಳಸಿ ಗಣೇಶನ ನಿರ್ಮಾಣ
ಹೌದು. ಇದು ವಿಶ್ವದ ಮೊದಲ ಚಿಪ್ಪಿನ ಗಣೇಶ ವಿಗ್ರಹ ಅನ್ನೋ ಹೆಗ್ಗಳಿಕೆ ಪಾತ್ರವಾಗಿದೆ.. ಇನ್ನು ಈ ಗಣೇಶ ನಿರ್ಮಾಣಕ್ಕಾಗಿ ಸುಮಾರು 7000 ಚಿಪ್ಪು ಬಳಸಿ ನಿರ್ಮಾಣ ಮಾಡಿ… ಇದನ್ನ ನಿರ್ಮಾಣ ಮಾಡಿದ್ದು ಯಾರು ಅನ್ನೋ ಪ್ರಶ್ನೆಗೆ ಉತ್ತರ ಸುದರ್ಶನ್ ಪಟ್ನಾಯಕ್.

ಸುದರ್ಶನ್ ಪಟ್ನಾಯಕ್ ಒಬ್ಬ ಮಹಾನ್ ಕಲಾವಿದರು. ಈ ಮಹಾನ್ ಕಲಾವಿದನ ಕೈಯಲ್ಲಿ ಮೂಡಿ ಬಂದಿದೆ ಈ ವಿಶ್ವದ ಮೊದಲ ಚಿಪ್ಪಿನ ಗಣಪತಿ. ಇನ್ನು ಇವರು ಹೀಗೆ ವಿಭಿನ್ನವಾಗಿ ಏನಾದ್ರು ಒಂದು ನಿರ್ಮಾಣ ಮಾಡುತ್ತಿರೋದು ಮೊದಲೇನಲ್ಲ.
ಪದ್ಮಶ್ರೀ ಪ್ರಶಸ್ತಿ ವಿಜೇತ, 27 ಅಂತಾರಾಷ್ಟ್ರೀಯ ಚಾಂಪಿಯನ್‌..

ಹೌದು.. ಒಡಿಶಾ ಮೂಲದ ಸುದರ್ಶನ್ ಪಟ್ನಾಯಕ್, 1977 ರಲ್ಲಿ ಪುರಿಯಲ್ಇ ಜನಿಸಿದ್ದರು.. ಚಿಕ್ಕಂದಿನಿಂದಲೇ ಕಲಾಕೃತಿಗಳಲ್ಲಿ ಆಸಕ್ತಿಯನ್ನ ಬೆಳೆಸಿಕೊಂಡಿದ್ದರು. ಅಲ್ಲದೇ ಮನೇ ಸಮೀಪದಲ್ಲೇ ಸಮುದ್ರ ಇದ್ದಿದ್ದರಿಂದ, ಸುದರ್ಶನ್ ಅವರಿಗೆ ಮರಳಿನಲ್ಲಿ ಕಲಾಕೃತಿ ಬಿಡಿಸಲು ಆರಂಭ ಮಾಡ್ತಾರೆ. ಆ ಮೂಲಕ ಅವರು ಮರಳಿನಲ್ಲಿ ಅನೇಕ ಅನೇಕ ಕಲಾಕೃತಿಗಳನ್ನ ಬಿಡಿಸೋದಕ್ಕೆ ಶುರು ಮಾಡಿಕೊಂಡು ಮುಂದೆ ಅದನ್ನ ತಮ್ಮ ಜೀವನವೃತ್ತಿಯನ್ನಾಗಿಸಿಕೊಂಡು ಬರುತ್ತಾರೆ. ಅವರಲ್ಲಿದ್ದ ಕಲೆ ಹಾಗು ಆಸಕ್ತಿಗೆ ಸುಮಾರು 27 ಅಂತಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿಗಳು ಲಭಿಸಿದೆ. ಅಲ್ಲದೇ ಅವರಲ್ಲಿರೋ ಕಲೆಯನ್ನ ಗುರುತಿಸಿ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ.

ಕೊರೊನಾ ಬಂದ ಸಂದರ್ಭದಲ್ಲಿ ಮಾಸ್ಕ್ ಅನ್ನ ಧರಿಸಿ ಎಂದು ಸಂದೇಶವನ್ನ ಸಾರೋದಕ್ಕಾಗಿ ಮಾಸ್ಕ್ ಅನ್ನ ಹಾಕಿರುವಂತಹ ಕಲಾಕೃತಿಯನ್ನ ಬಿಡಿಸಿ ಎಲ್ಲರ ಗಮನ ಸೆಳೆದಿದ್ದರು. ಇನ್ನು ಡೊನಾಲ್ಡ್ ಟ್ರಂಪ್ ಅಮೇರಿಕಾದ ಅದ್ಯಕ್ಷ ಆಗಿದ್ದಾಗ ಅಮೇರಿಕಾದ ಪ್ರಥಮ ಮಹಿಳೆ ಹಾಗು ಡೊನಾಲ್ಡ್ ಟ್ರಂಪ್ ಕಲಾಕೃತಿಯನ್ನ ನಿರ್ಮಿಸಿ ವಿಶ್ವದಲ್ಲೆ ಗಮನವನ್ನ ಸೆಳೆದಿದ್ದರು..ಇವತ್ತು ದೇಶದಲ್ಲಿಯೇ ಕೌನ್ ಬನೇಗ ಕರೋಡಪತಿ ರಿಯಾಲಿಟಿ ಶೋ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ಆ ಕೌನ್ ಬನೇಗ ಕರೋಡಪತಿಯಲ್ಲಿ ಒಂದು ಎಪಿಸೋಡ್ನಲ್ಲಿ ಇವರ ಬಗ್ಗೆ ಒಂದು ಪ್ರಶ್ನೆಯನ್ನ ಕೂಡ ಕೇಳಲಾಗಿರುತ್ತೇ.

ಇನ್ನು ಕೇರಳದಲ್ಲಿ ನಡೆದಿದ್ದ ಗರ್ಭಿಣಿ ಆನೆ ಸಾವು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆನೆಯ ಕಲಾಕೃತಿಯನ್ನ ಬಿಡಿಸಿ ನೋಡುಗರ ಕಣ್ಣಲ್ಲಿ ನೀರು ಬರುವಂತೆ ಮಾಡಿದ್ದರು. ನೋಡಿ ಹೀಗೆ ನಾಡಿನ ಕಲೆ, ಕೃತಿ, ಸಂಸ್ಕೃತಿಗೆ ಸಂಬಂಧಪಟ್ಟಂತೆ ಕಲಾಕೃತಿಗಳನ್ನ ಮರಳಿನಲ್ಲಿ ಮೂಡಿಸಿ ವಿಶ್ವ ವಿಖ್ಯಾತಿ ಪಡೆರಿ ಸುದರ್ಶನ್ ಅವರು ಗಣೇಶ ಹಬ್ಬದ ಪ್ರಯುಕ್ತ ಈಗ ಚಿಪ್ಪಿನ ಗಣಪನನ್ನ ಬಿಡಿಸಿ ಮತ್ತೊಮ್ಮೆ ಜಗತ್ಪ್ರಸಿದ್ಧಿಯಾಗಿದ್ದಾರೆ.

ಸುದರ್ಶನ್ ಪಟ್ನಾಯಕ್ ಅವರಲ್ಲಿರೋ ಆ ಒಂದು ಕಲೆಗೆ ನಾವೆಲ್ಲರು ಮೆಚ್ಚಲೇಬೇಕು.ಕೈಯಲ್ಲಿ ಪೆನ್ ಹಿಡಿದು ಒಂದು ಪಕ್ಷಿ ಬರೆಯೋಕೆ ನಾವು ತಡಬಡಾಯಿಸುತ್ತೇವೆ. ಅಂಥ್ರದಲ್ಲಿ ಅವರು ಮರಳಿನಲ್ಲಿ ಒಂದು ಕಲಾಕೃತಿ ನಿರ್ಮಾಣ ಮಾಡ್ತಾರೆ ಅಂದ್ರೆ ಮೆಚ್ಚಲೇಬೇಕು. ಅವರಿಗೆ ಮತ್ತಷ್ಟು ಖ್ಯಾತಿ ಸಿಗಲಿ ಅಂತಾ ನಾವೆಲ್ಲರು ಆಶಿಸೋಣಾ..

- Advertisement -

Related news

error: Content is protected !!