Wednesday, May 15, 2024
spot_imgspot_img
spot_imgspot_img

‘ಡಿಜಿಟಲ್‌ ರೂಪಾಯಿ ಪ್ರಾಯೋಗಿಕ ಬಳಕೆ ಶೀಘ್ರ ಆರಂಭ’; ಆರ್‌ಬಿಐ

- Advertisement -G L Acharya panikkar
- Advertisement -

ನವದೆಹಲಿ: ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಪರಿಕಲ್ಪನೆಯ ಟಿಪ್ಪಣಿಯನ್ನು ಆರ್‌ಬಿಐ ಶುಕ್ರವಾರ ಬಿಡುಗಡೆಗೊಳಿಸಿದೆ. ಮುಂದಿನ ದಿನಗಳಲ್ಲಿ ಇ-ರೂಪಾಯಿಯ ಪ್ರಾಯೋಗಿಕ ಬಳಕೆಯನ್ನು ಕೇಂದ್ರೀಯ ಬ್ಯಾಂಕ್‌ ನಿರ್ದಿಷ್ಟ ಬಳಕೆ ಪ್ರಕರಣದಡಿ ಆರಂಭ ಮಾಡಲಿದೆ.

ಈ ಕುರಿತು ಹೇಳಿಕೆ ನೀಡಿರುವ ಆರ್‌ಬಿಐ, ಆರಂಭದಲ್ಲಿ ಬಳಕೆ ಪ್ರಾಯೋಗಿಕವಾಗಿರಲಿದೆ. ಮುಂದುವರಿದಂತೆ ಇದರ ವ್ಯಾಪ್ತಿ ವಿಸ್ತರಿಸಿಕೊಂಡು ಡಿಜಿಟಲ್ ರೂಪಾಯಿಯ ಪ್ರಯೋಜನ ಕುರಿತು ಸಂವಹನವನ್ನೂ ಆರ್‌ಬಿಐ ಮುಂದುವರಿಸಲಿದೆ. ಪ್ರಸ್ತುತ ಲಭ್ಯ ಹಣದ ರೂಪಕ್ಕೆ ಹೆಚ್ಚುವರಿ ಆಯ್ಕೆ ಒದಗಿಸುವ ಕ್ರಮವಾಗಿ ಇದು ರೂಪು ತಳೆಯಲಿದೆ. ಡಿಜಿಟಲ್ ವ್ಯವಸ್ಥೆಯಾಗಿರುವುದರಿಂದ ಸರಳ ಮತ್ತು ಅಗ್ಗವಾಗುವ ಸಾಧ್ಯತೆಯೂ ಇದರಲ್ಲಿದೆ ಎಂದು ತಿಳಿಸಿದೆ.

ರೂಪಾಯಿಗೆ ಸಮಾನವಾದ ಡಿಜಿಟಲ್ ಕರೆನ್ಸಿಯನ್ನು ಈ ಹಣಕಾಸು ವರ್ಷದಲ್ಲೇ ಆರ್‌ಬಿಐ ಬಿಡುಗಡೆಗೊಳಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ರ ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಿದ್ದರು.

- Advertisement -

Related news

error: Content is protected !!