Friday, April 19, 2024
spot_imgspot_img
spot_imgspot_img

ಡಿ.ಕೆ.ಶಿ​ ಒಡೆತನದ ಶಾಲೆಗೆ ಬಾಂಬ್‌ ಬೆದರಿಕೆ; ಹತ್ತನೇ ತರಗತಿ ವಿದ್ಯಾರ್ಥಿಯ ಪ್ಲಾನ್‌ಗೆ ಬೆಚ್ಚಿ ಬಿದ್ದ ಬೆಂಗಳೂರು

- Advertisement -G L Acharya panikkar
- Advertisement -

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಒಡೆತನದ ‘ನ್ಯಾಷನಲ್ ಹಿಲ್​ ವ್ಯೂ ಪಬ್ಲಿಕ್ ಸ್ಕೂಲ್’ಗೆ ಬಾಂಬ್​ ಇಡೋದಾಗಿ ‘ಹುಚ್ಚ ಸ್ವಾಮಿ ವೆಂಕಟ್’​ ಹೆಸರಿನಲ್ಲಿ ಬೆದರಿಕೆ ಮೇಲ್​ ಕಳಿಸಿ ಸೋಮವಾರ ಇಡೀ ದಿನ ಆತಂಕ ಹುಟ್ಟಿಸಿದ್ದು ಯಾರೆಂದು ಬಯಲಾಗಿದೆ.

ನ್ಯಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಸ್ಕೂಲ್​ಗೆ ಬಾಂಬ್​ ಇಡುವುದಾಗಿ ಬೆದರಿಕೆ ಮೇಲ್​ ಕಳುಹಿಸಿದ್ದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. ಜು.21ರಂದು 10ನೇ ತರಗತಿಗೆ ಮೊದಲ ಸೆಮಿಸ್ಟರ್ ಪರೀಕ್ಷೆ ಇತ್ತು. ಪರೀಕ್ಷೆ ಮುಂದೂಡಿಸಲೆಂದು ಪ್ಲ್ಯಾನ್ ಮಾಡಿದ ವಿದ್ಯಾರ್ಥಿಯೊಬ್ಬ, [email protected] ಅನ್ನೋ ಮೇಲ್ ಐಡಿಯಿಂದ, ಭಾನುವಾರ ಸಂಜೆ 6.30ಕ್ಕೆ ಸ್ಕೂಲ್​ನ 3ನೇ ಯೂನಿಟ್​ಗೆ ಬೆದರಿಕೆ ಮೇಲ್​ ಕಳುಹಿಸಿದ್ದ.

‘ಕ್ಯಾಂಪಸ್ ಹಾಗೂ ಶಾಲೆಯಲ್ಲಿ ಬಾಂಬ್ ಇಡಲಾಗಿದೆ. ನಾಳೆ(ಸೋಮವಾರ) ಬೆಳಗ್ಗೆ 10 ಗಂಟೆಗೆ ಬ್ಲಾಸ್ಟ್ ಆಗುವ ಹಾಗೇ ಫಿಕ್ಸ್ ಮಾಡಲಾಗಿದೆ. ಶಾಲೆ ಆವರಣದ 200 ಮೀಟರ್ ಅದರ ಎಫೆಕ್ಟ್ ಆಗುತ್ತೆ. ಥ್ಯಾಂಕ್ಸ್​, ಬಾಂಬ್ ಟೆರರಿಸ್ಟ್’ ಎಂದು ಮೇಲ್​ ಕಳುಹಿಸಿದ್ದ.

ಸೋಮವಾರ ಬೆಳಗ್ಗೆ ಸಿಬ್ಬಂದಿ ಶಾಲೆಗೆ ಬಂದಾಗ ಮೇಲ್​ ನೋಡಿ ಸಿಬ್ಬಂದಿ ಗಾಬರಿಯಾಗಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಆರ್​ಆರ್​ ನಗರ ಠಾಣೆ ಪೊಲೀಸರು ಮತ್ತು ಬಾಂಬ್​ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಯಾವುದೇ ಅನುಮಾನಾಸ್ಪದ ವಸ್ತು ಕಂಡು ಬಂದಿಲ್ಲ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಆರ್​ಆರ್ ನಗರ ಪೊಲೀಸರು, ವಿದ್ಯಾರ್ಥಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ. ವಿದ್ಯಾರ್ಥಿಯನ್ನ ಬಾಲ ಅಪರಾಧಿಗಳ ಪುನಶ್ಚೇತನ ಕೇಂದ್ರಕ್ಕೆ ಕಳುಹಿಸಿದ್ದಾರೆ.

- Advertisement -

Related news

error: Content is protected !!