Friday, March 29, 2024
spot_imgspot_img
spot_imgspot_img

ಡೈಮಂಡ್‌ ಲೀಗ್‌ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ನೀರಜ್ ಚೋಪ್ರಾ.

- Advertisement -G L Acharya panikkar
- Advertisement -
astr

ಒಲಿಂಪಿಕ್ ಚಿನ್ನದ ಪದಕ ವಿಜೇತ, ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. ಸ್ವಿಜರ್ ಲ್ಯಾಂಡ್ ನ ಜ್ಯೂರಿಕ್ ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಅಂತಿಮ ಪದಕ ಗಳಿಸಿದ ಮೊದಲ ಭಾರತೀಯ ಕ್ರೀಡಾಪಟು ಆಗಿದ್ದಾರೆ.

ಆಟದ ಆರಂಭದಲ್ಲಿ ನೀರಜ್ ಚೋಪ್ರಾ ಅವರು ಎಡವಿದರೂ ಕೂಡ ಎರಡನೇ ಪ್ರಯತ್ನದಲ್ಲಿ ಎರಡನೇ ಪ್ರಯತ್ನದಲ್ಲಿ 88.44 ಮೀಟರ್ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಅವರು ಮೊದಲ ಸ್ಥಾನ ಪಡೆದರು. ಟೋಕಿಯೋ ಒಲಿಂಪಿಕ್ ಗೋಲ್ಡ್ ಮೆಡಲಿಸ್ಟ್ ಆಟದ ಮುಂದೆ ಉಳಿದವರ ಆಟ ನಡೆಯಲಿಲ್ಲ.

ನೀರಜ್ 88.44 ಮೀಟರ್ ಗೆ ಜಾವೆಲಿನ್ ಎಸೆದು ತಮ್ಮ ಇದುವರೆಗಿನ ವೃತ್ತಿಜೀವನದಲ್ಲಿ ನಾಲ್ಕನೇ ಅತ್ಯುತ್ತಮ ಪ್ರದರ್ಶನ ತೋರಿಸಿದ್ದಾರೆ. ಜೇಕಬ್‌ ವಾಡ್ಲೆಚ್‌ (85.88 ಮೀ.) ಎರಡನೇ ಸ್ಥಾನ ಪಡೆದರೆ, ಅಮೆರಿಕದ ಕರ್ಟಿಸ್‌ ಥಾಂಪ್ಸನ್‌ (83.72 ಮೀ.) ಮೂರನೇ ಸ್ಥಾನ ಗಳಿಸಿದರು. ಜುಲೈನಲ್ಲಿ ಯುಎಸ್ ಎ ನಲ್ಲಿ ನಡೆದ ವಿಶ್ವ ಚಾಂಪಿಯನ್‌ ಶಿಪ್‌ ನಲ್ಲಿ ಬೆಳ್ಳಿ ಗೆದ್ದ ಪ್ರದರ್ಶನದ ಸಂದರ್ಭದಲ್ಲಿ ಅವರು ಅನುಭವಿಸಿದ ಸಣ್ಣ ತೊಡೆಸಂದು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಕಾಮನ್​ವೆಲ್ತ್​ ಗೇಮ್ಸ್​ ನಲ್ಲಿ ಆಡಿರಲಿಲ್ಲ.

- Advertisement -

Related news

error: Content is protected !!