Tuesday, May 21, 2024
spot_imgspot_img
spot_imgspot_img

ತಂಗಿ ಮೃತಪಟ್ಟ ವಿಷಯವನ್ನು ಮುಚ್ಚಿಟ್ಟು 4 ದಿನಗಳ ಕಾಲ ಕೊಳೆತ ಶವದ ಜೊತೆ ಕಾಲ ಕಳೆದ ಅಕ್ಕ!

- Advertisement -G L Acharya panikkar
- Advertisement -
suvarna gold

ತೆಲಂಗಾಣ: ಮಹಿಳೆಯೊಬ್ಬರು ನಾಲ್ಕು ದಿನಗಳ ಕಾಲ ತಂಗಿ ಶವದ ಜತೆಯಲ್ಲೇ ಕಾಲ ಕಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೆದ್ದಪಲ್ಲಿ ಪಟ್ಟಣದ ಪ್ರಗತಿ ನಗರದ ಮನೆಯಲ್ಲಿ ಷರ್ವದ ಸ್ವಾತಿ (26) ಮತ್ತು ಈಕೆಯ ತಂಗಿ ಶ್ವೇತಾ ಇಬ್ಬರೂ ವಾಸವಿದ್ದರು.

ಶ್ವೇತಾ ಎಂಬಿಎ ಪಧವೀದರೆ. ಎಂಟೆಕ್​ ಓದಿರುವ ಸ್ವಾತಿ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಶ್ವೇತಾ ಜ್ವರದಿಂದ ಬಳಲುತ್ತಿದ್ದಳು. ಒಮ್ಮೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನೂ ಪಡೆದು ಮನೆಗೆ ವಾಪಸ್​ ಆಗಿದ್ದಳು. ದಿನದಿಂದ ದಿನಕ್ಕೆ ಅನಾರೋಗ್ಯ ಹದಗೆಟ್ಟು ಉಸಿರಾಟ ಸಮಸ್ಯೆ ಉಂಟಾಗಿ ಶ್ವೇತಾ(24) ಮನೆಯಲ್ಲೇ ಮೃತಪಟ್ಟಿದ್ದಾಳೆ. ತಂಗಿ ಸಾವಿನ ಬಗ್ಗೆ ಯಾರಿಗೂ ತಿಳಿಸದೆ ಶವದ ಜತೆಯಲ್ಲೇ ಅಕ್ಕ ನಾಲ್ಕು ದಿನ ಕಳೆದಿದ್ದಾಳೆ.

vtv vitla

ಶವ ಕೊಳೆಯಲಾರಂಭಿಸಿ ದುರ್ವಾಸನೆ ಬರುತ್ತಿದ್ದರೂ ಅಕ್ಕ ಯಾರಿಗೂ ಹೇಳಿಲ್ಲ. ಅಕ್ಕ-ಪಕ್ಕದ ಮನೆಯವರು ದುರ್ವಾಸನೆ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮನೆಯ ಒಳಗೆ ಹೋಗಿ ಪರಿಶೀಲಿಸಿದಾಗ ಶ್ವೇತಾ ಶವ ಕಂಡು ಬಂದಿದೆ. ಅಕ್ಕ ಸ್ವಾತಿಯನ್ನು ವಿಚಾರಣೆ ನಡೆಸಿದ್ದು, ತಂಗಿ ಅನಾರೋಗ್ಯದಿಂದ ಸಾವನ್ನಪ್ಪಿರುವುದು ಗೊತ್ತಾಗಿದೆ. ಕೊಳೆತ ದೇಹವನ್ನು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಸ್ವಾತಿ ಮಾನಸಿಕ ರೋಗದಿಂದ ಬಳಲುತ್ತಿದ್ದರು.

ಕೆಲ ವರ್ಷಗಳ ಹಿಂದೆಯೇ ಸ್ವಾತಿ ಮತ್ತು ಶ್ವೇತಾರ ತಾಯಿ,ತಂದೆ ಇಬ್ಬರೂ ಮೃತಪಟ್ಟಿದ್ದಾರೆ. ಇಬ್ಬರು ಅಜ್ಜಿಯಂದಿರ ಆಶ್ರಯದಲ್ಲೇ ಸಹೋದರಿಯರು ಬೆಳೆದಿದ್ದು, ಇತ್ತೀಚಿಗೆ ಅಜ್ಜಿಂದಿರೂ ಮೃತಪಟ್ಟಿದ್ದಾರೆ. ಅಜ್ಜಿಯಂದಿರು ಸತ್ತಾಗಲೂ ಎರಡ್ಮೂರು ದಿನ ಅಕ್ಕ-ತಂಗಿ ಯಾರಿಗೂ ವಿಷಯ ಹೇಳಿರಲಿಲ್ಲವಂತೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!