Thursday, April 25, 2024
spot_imgspot_img
spot_imgspot_img

ತಂದೆಯಿಂದಲೇ ನಿರಂತರ ಅತ್ಯಾಚಾರ; ಒಂದು ತಿಂಗಳ ಕಾಲ ಈಕೆಯನ್ನು ಕಂಟೈನರ್‌ನಲ್ಲಿಟ್ಟು ಪೀಡಿಸಿದ ಸೆಕ್ಸ್ ದಂಧೆಕೋರರು..! ಅಪ್ರಾಪ್ತೆಯನ್ನು ರಕ್ಷಿಸಿದ ಪೊಲೀಸರು

- Advertisement -G L Acharya panikkar
- Advertisement -

ಬೆಂಗಳೂರು: ಈಕೆಗಿನ್ನೂ ಪ್ರಾಯ 15. ತಂದೆ ಎನಿಸಿಕೊಂಡವ ಈಕೆಯನ್ನು ಮುದ್ದಿಸಿ ಪೋಷಿಸಬೇಕಿತ್ತು. ಆದ್ರೆ ಇವಳ ಬಾಳಲ್ಲಿ ನಡೆದದ್ದು ಮಾತ್ರ ದುರಂತ ಕಥೆ. ಸ್ವಂತ ತಂದೆಯೇ ಈಕೆಯ ಪಾಲಿಗೆ ಮುಳುವಾಗಿದ್ದ. ಆತನಿಂದ ತಪ್ಪಿಸಿಕೊಂಡು ಬಂದವಳು ಮತ್ತೆ ಸೇರಿದ್ದು ಸೆಕ್ಸ್ ದಂಧೆಕೋರರ ಕೈಗೆ. ಈಗ ಈಕೆಯನ್ನು ಪೊಲೀಸರು ರಕ್ಷಿಸಿದ್ದಾರೆ.

ಸ್ವಂತ ತಂದೆಯಿಂದಲೇ ನಿರಂತರವಾಗಿ ಅತ್ಯಾಚಾರಕ್ಕೊಳಗಾಗಿ ತೀವ್ರ ನೊಂದು ಆತನಿಂದ ತಪ್ಪಿಸಿಕೊಂಡು ಓಡಿ ಬಂದು ಸೆಕ್ಸ್ ದಂಧೆಕೋರರ ಕೈಗೆ ಸಿಕ್ಕಿ ಬಿದಿದ್ದ ಬಿಹಾರದ ಮೂಲದ ಅಪ್ರಾಪ್ತ ಬಾಲಕಿಯನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಪೊಲೀಸರು ರಕ್ಷಣೆ ಮಾಡಿದ್ದಾರೆ.

ಜುಲೈ 9ರಂದು ಬಿಹಾರಕ್ಕೆ ತೆರಳುವ ದಾನಾಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಆಕೆಯನ್ನು ಅಪರಿಚಿತ ಸ್ಥಳಕ್ಕೆ ಸಾಗಿಸಲು ದಂಧೆಕೋರರು ಪ್ಲಾನ್ ಮಾಡಿದ್ದರು. ಕೃಷ್ಣರಾಜಪುರಂ ರೈಲ್ವೆ ನಿಲ್ದಾಣದಲ್ಲಿ ಶೋಧ ನಡೆಸಿದ್ದ ವೇಳೆ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಬಾಲಕಿಯನ್ನು ಗಮನಿಸಿದ ಅಧಿಕಾರಿಗಳು ಆಕೆಯನ್ನು ಮಾತನಾಡಿಸಿದ್ದಾರೆ. ಈ ವೇಳೆ ಬಾಲಕಿ ತುಂಬಾ ಭಯಭೀತಳಾಗಿದ್ದಳು. ಆಕೆ ನೀಡಿದ ಮಾಹಿತಿ ಮೇರೆಗೆ ಕೂಡಲೇ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಆಕೆಯನ್ನು ರಕ್ಷಿಸಿದ್ದಾರೆ.

ಬಿಹಾರದ ಪೂರ್ವಿ ಚಂಪಾರನ್ (ಮೋತಿಹಾರಿ) ನಿವಾಸಿ ಎಂದು ಹೇಳಿಕೊಂಡ ಬಾಲಕಿ ತನ್ನ ತಂದೆಯಿ0ದ ಪದೇ ಪದೇ ನಡೆಯುವ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದಿಂದಾಗಿ ಬೇಸತ್ತು ಮನೆಯಿಂದ ಓಡಿಹೋಗಿದ್ದಳು. ಈ ವಿಚಾರ ಆಕೆಯ ತಾಯಿಗೂ ತಿಳಿದಿತ್ತಾದರೂ ಆಕೆ ಮಧ್ಯಪ್ರವೇಶಿಸುತ್ತಿರಲಿಲ್ಲ. ಅಲ್ಲದೆ ಅಪ್ರಾಪ್ತೆಯಾದ ಆಕೆಯನ್ನು ಮದುವೆ ಮಾಡಿಸಲು ಆಕೆಯ ಪೋಷಕರು ಸಿದ್ಧತೆ ನಡೆಸಿದ್ದರು. ಇದರಿಂದ ಬೇಸರಗೊಂಡ ಆಕೆ ಮನೆಯಿಂದ ಪರಾರಿಯಾಗಿದ್ದಳು.

ಬೆಂಗಳೂರಿಗೆ ಬಂದಿದ್ದ ಆಕೆಗೆ ಕೆಲ ದುಷ್ಕರ್ಮಿಗಳು ಡ್ರಗ್ಸ್ ನೀಡಿ ಆಕೆಯನ್ನು ಅಪಹರಿಸಿದ್ದರು. ಕಂಟೈನರ್ ನಲ್ಲಿಟ್ಟು ಆಕೆಯನ್ನು ಸುಮಾರು 1 ತಿಂಗಳ ಕಾಲ ಪೀಡಿಸಿದ್ದರು. ಬಳಿಕ ರೈಲಿನಲ್ಲಿ ಬೇರೊಂದು ಸ್ಥಳಕ್ಕೆ ಕಳ್ಳಸಾಗಣೆ ಮಾಡುವಾಗ ಶಕ್ತಿ ತಂಡದ ಸಿಬ್ಬಂದಿಗಳು ಆಕೆಯನ್ನು ಗುರುತಿಸಿ ರಕ್ಷಣೆ ಮಾಡಿದ್ದಾರೆ. ಪ್ರಸ್ತುತ ಬಾಲಕಿಯನ್ನು ಕೆಎಸ್‌ಆರ್ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯಲಾಗಿದ್ದು, ಆಕೆಯ ಸುರಕ್ಷತೆಗಾಗಿ ಡಾನ್ ಬಾಸ್ಕೊ ಹೋಮ್‌ಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳ ತಿಳಿಸಿವೆ. ಪೋಸ್ಕೋ ಕಾಯ್ದೆ ಮತ್ತು ಇತರೆ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

- Advertisement -

Related news

error: Content is protected !!