Monday, April 7, 2025
spot_imgspot_img
spot_imgspot_img

ತಲೆ, ಮರ್ಮಾಂಗಕ್ಕೆ ಹೊಡೆದು ಗಂಡನನ್ನೇ ಕೊಲೆಗೈದ ಪತ್ನಿ..! ಟೆರೇಸ್‌ ಮೇಲೆ ನಡೆದ ಭೀಕರ ಹತ್ಯೆಗೆ ಸ್ಕೆಚ್‌ ಕೊಟ್ಟಿದ್ದು ಆಕೆಯ ಪ್ರಿಯಕರ…!

- Advertisement -
- Advertisement -

ಪತಿ ತನ್ನ ಅಕ್ರಮ ಸಂಭಂದಕ್ಕೆ ಅಡ್ಡಿಯಾಗುತ್ತಿದ್ದ ಎಂದು ಸ್ನೇಹಿತನ ಮಾತು ಕೇಳಿ ಕೊಲೆಗೈದ ಘಟನೆ ನಡೆದಿದೆ. ತಮ್ಮದೇ ಮನೆಯ ಟರೇಸ್ ಮೇಲೆ ಇಬ್ಬರು ಕೂಡಿ ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ. ಕೆಲ ದಿನಗಳ ಹಿಂದೆ ಚಂದ್ರಶೇಖರ್ ಎಂಬವರನ್ನು ಅವರ ಮನೆಯ ಟರೇಸ್ ಮೇಲೆಯೇ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ತನಿಖೆ ನಡೆಸಿದಾಗ ತನಿಖೆಯ ಮೊದಲು ದಿಕ್ಕು ತಪ್ಪಿಯಲು ಹೆಂಡತಿ ನಾಟಕವಾಡಿದ್ದಳು. ನಂತರ ಬೆಂಗಳೂರು ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆ ಸಂದರ್ಭದಲ್ಲಿ ಚಂದ್ರಶೇಖರ್ ಪತ್ನಿ ಮತ್ತು ಆಕೆಯ ಸ್ನೇಹಿತನ ಮೇಲೆ ಶಂಕೆ ವ್ಯಕ್ತವಾಗಿತ್ತು. ಅದರಂತೆ ಮಹಿಳೆಯನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಆಕೆಯ ಅಕ್ರಮ ಸಂಬಂಧದ ವಿಚಾರ ತಿಳಿದುಬಂದಿದೆ. ಪತಿ ತನ್ನ ಅಕ್ರಮ ಸಂಭಂದಕ್ಕೆ ಅಡ್ಡಿಯಾಗುತ್ತಿದ್ದ ಎಂದು ಸ್ನೇಹಿತನ ಮಾತು ಕೇಳಿ ಮನೆಯ ಟರೇಸ್ ಮೇಲೆ ಇಬ್ಬರು ಕೂಡಿ ಕೊಲೆ ಮಾಡಿದ್ದಾಗಿ ಪೊಲೀಸರು ವಿಚಾರಣೆ ವೇಳೆ ಮಹಿಳೆ ಬಾಯಿಬಿಟ್ಟಿದ್ದಾಳೆ.

ಚಂದ್ರಶೇಖರ್ ಮತ್ತು ಶ್ವೇತ ನಾಲ್ಕು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ನಡುವೆ 16 ವರ್ಷ ಅಂತರವಿದ್ದರೂ ಬಲವಂತವಾಗಿ ಮದುವೆ ಮಾಡಿಸಲಾಗಿತ್ತು. ಶ್ವೇತಾಳಿಗೆ ಕಾಲೇಜು ಗೆಳೆಯರು ಹಾಗೂ ಬೇರೆ ಸ್ನೇಹಿತರು ಇರುವುದರಿಂದ ಈ ವಿಚಾರದಲ್ಲಿ ದಂಪತಿ ನಡುವೆ ಪದೇಪದೇ ಜಗಳ ನಡೆಯುತ್ತಿತ್ತು. ಈ ನಡುವೆ ಹಿಂದುಪುರದ ಸುರೇಶ್ ಎಂಬಾತನೊಂದಿಗೆ ಶ್ವೇತಾ ಸಂಪರ್ಕದಲ್ಲಿದ್ದಳು.

ಅಕ್ರಮ ಸಂಬಂಧಕ್ಕೆ ಅಡ್ಡಿ ಬಂದ ಗಂಡನನ್ನು ಮುಗಿಸಿಬಿಡುವಂತೆ ಪ್ರಿಯಕರ ಸುರೇಶ್‌ ಶ್ವೇತಾಗೆ ಹೇಳಿಕೊಟ್ಟಿದ್ದಾನೆ. ಈತನ ಮಾತು ಕೇಳಿದ ಶ್ವೇತ ಪತಿಯ ಕೊಲೆಗೆ ಮುಂದಾಗಿದ್ದಾಳೆ. ಅದರಂತೆ ಪೂರ್ವ ತಯಾರಿ ನಡೆಸಿಕೊಂಡು ಸುರೇಶ್ ಶ್ವೇತಾಳ ಮನೆಗೆ ಬಂದಿದ್ದು, ಚಂದ್ರಶೇಖರ್ ಟರೇಸ್ ಮೇಲೆ ಇದ್ದಾಗ ಮರ್ಮಾಂಗ ಹಾಗೂ ತಲೆಗೆ ಹಲ್ಲೆ ನಡೆಸಿ ಕೊಂದು ಹಾಕಿದ್ದರು.

ಈ ಕೊಲೆ ಪ್ರಕರಣ ಅಕ್ಟೋಬರ್ 22ರಂದು ನಡೆದಿತ್ತು. ಆರಂಭದಲ್ಲಿ ಶ್ವೇತಾಳನ್ನು ಪ್ರಾಥಮಿಕ ತನಿಖೆ ನಡೆಸಿದಾಗ ಆಕೆ ಪೊಲೀಸರ ಮುಂದೆ, ಕೊಲೆ ಯಾರು ಮಾಡಿದ್ದಾರೆ ಎಂದು ಗೊತ್ತಿಲ್ಲ ಎಂದಿದ್ದಳು. ಅದಾಗ್ಯೂ ಪೊಲೀಸರಿಗೆ ಅನುಮಾನ ವ್ಯಕ್ತವಾದ ಹಿನ್ನೆಲೆ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶ್ವೇತಾ ತನ್ನ ಮತ್ತು ಸುರೇಶ್ ನಡುವಿನ ಅಕ್ರಮ ಸಂಬಂಧದ ಬಗ್ಗೆ ಬಾಯಿಬಿಟ್ಟಿದ್ದಾಳೆ. ಸದ್ಯ ಕೊಲೆ ಆರೋಪಿ ಸುರೇಶ್​ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!