Saturday, June 27, 2026
spot_imgspot_img
spot_imgspot_img

ತಾನೇ ಕೊಲೆ ಮಾಡಿ ಬಡಪಾಯಿಯಂತೆ ನಾಟಕವಾಡಿದ್ದ ಪತಿ ಅಂದರ್

- Advertisement -
- Advertisement -
vtv vitla
vtv vitla

ಕಲಬುರಗಿ: ಪತ್ನಿಯನ್ನೇ ಕೊಲೆ ಮಾಡಿ ನಾಟಕವಾಡಿದ್ದ ಪತಿ ಅರೆಸ್ಟ್ ಆಗಿದ್ದಾನೆ. ಬಸವರಾಜ್ ಕಟ್ಟಿಮನಿ (40) ಬಂಧಿತ ವ್ಯಕ್ತಿ. ಬಂಧಿತ ಆರೋಪಿ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಅಂತ ತಾನೇ ಬಿಂಬಿಸಿದ್ದ. ತನಗೆ ನ್ಯಾಯಬೇಕು, ತನ್ನ ಪತ್ನಿ ಹಂತಕರನ್ನು ಪತ್ತೆ ಮಾಡಬೇಕು ಅಂತ ನಾಟಕವಾಡಿದ್ದ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.

ಗ್ರಾಮದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿ ಶಾಮಲಾಬಾಯಿ ಕೊಲೆಯಾಗಿತ್ತು. ಮಾರ್ಚ್ 3 ರಂದು ಕೊಲೆಯಾಗಿತ್ತು. ಈ ಬಗ್ಗೆ ಗಾಣಗಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದಾಗ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಮಾಹಿತಿ ಬಯಲಿಗೆ ಬಂದಿದೆ.

- Advertisement -

Related news

error: Content is protected !!