

ತನ್ನ ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಜನನಾಂಗಗಳನ್ನು ಹುಡುಗಿಯು ಕತ್ತರಿಸಿದ ಘಟನೆ ವರದಿಯಾಗಿದೆ. ಪೊಲೀಸರ ಮೂಲಗಳ ಪ್ರಕಾರ, ಎಸ್ ರಾಮಚಂದ್ರ ರೆಡ್ಡಿ ಎರಡು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಬಾಪಟ್ಲಾ ಜಿಲ್ಲೆಯ ಚೆರುಕುಪಲ್ಲಿ ಮಂಡಲದ ತುಮ್ಮಲಪಾಲೆಮ್ ಗ್ರಾಮದಿಂದ ತೆನಾಲಿಗೆ ತೆರಳಿದ್ದರು. ರಾಮಚಂದ್ರ ರೆಡ್ಡಿ ತೆನಾಲಿ ರೈಲ್ವೆ ನಿಲ್ದಾಣದ ಬಳಿಯಲ್ಲಿರುವ ಲಾಡ್ಜ್ ನಲ್ಲಿ ವಾಸಿಸುವ ಮೂಲಕ ಜೀವನ ಸಾಗಿಸುತ್ತಿದ್ದನಂತೆ.
ರಾಮಚಂದ್ರ ಅವರು ಇತಾನಗರದಲ್ಲಿ ವಾಸಿಸುತ್ತಿದ್ದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧವನ್ನು ಬೆಳಸಿಕೊಂಡಿದ್ದಾನೆ. ಇದೇ ವೇಳೇ ಆತ ಸೋಮವಾರ ರಾತ್ರಿ, ಆ ಮಹಿಳೆ ವಾಸಿಸುತ್ತಿರುವ ಮನೆಯ ಟೆರೇಸ್ ಮೇಲೆ ಇಬ್ಬರೂ ಮಲಗಿದ್ದಾರೆ. ಈ ವೇಳೆ ತನ್ನ ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ ಮಹಿಳೆಯ ಮಗಳು ರಾಮಚಂದ್ರನ ಮೇಲೆ ತುಂಬಾ ಕೋಪಗೊಂಡಿದ್ದಾಳೆ.
ಮಗಳು ಮತ್ತು ರಾಮಚಂದ್ರ ರೆಡ್ಡಿ ಪರಸ್ಪರ ಜಗಳವಾಡಿದ್ದಾರೆ. ಜಗಳ ತಾರಕಕ್ಕೇರಿ ಹುಡುಗಿ ರಾಮಚಂದ್ರನ ಮಾರ್ಮಾಂಗಕ್ಕೆ ಚಾಕುವಿನಿಂದ ಚುಚ್ಚಿದ್ದಾಳೆ. ರಾಮಚಂದ್ರನ ಕಿರುಚಾಟವನ್ನು ಕೇಳಿದ ಸ್ಥಳೀಯ ನಿವಾಸಿಗಳು ಎಚ್ಚರಗೊಂಡು ಗಾಯಾಳುವನ್ನು ತೆನಾಲಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ನಂತರ ಗುಂಟೂರಿನ ಜಿಜಿಎಚ್ ಗೆ ದಾಖಲಿಸಿ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ,. ಸದ್ಯ ರಾಮಚಂದ್ರ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.











