Monday, May 6, 2024
spot_imgspot_img
spot_imgspot_img

ತುಳುನಾಡಿನ ಕೋಳಿ ಅಂಕಕ್ಕೆ ಗ್ರೀನ್ ಸಿಗ್ನಲ್; ಫೈಟರ್ ಹುಂಜಗಳಿಗೆ ಹೆಚ್ಚಿದ ಡಿಮ್ಯಾಂಡ್.!

- Advertisement -G L Acharya panikkar
- Advertisement -

ಮಂಗಳೂರು: ಕೋಳಿ ಅಂಕಕ್ಕೆ ನ್ಯಾಯಾಲಯ ಷರತ್ತು ಬದ್ಧ ಅನುಮತಿ ನೀಡಿದೆ. ಪೊಲೀಸ್ ದಾಳಿಯ ಭಯದಿಂದ‌ ಇಲ್ಲಿಯವರೆಗೆ ತೆರೆಮರೆಯಲ್ಲಿ ನಡೆಯುತ್ತಿದ್ದ ಕರಾವಳಿಯ ಕೋಳಿ ಅಂಕಗಳು, ಇನ್ನು ಮುಂದೆ ಬಹಿರಂಗವಾಗಿಯೇ ನಡೆಯಲಿದೆ.

ಈ ಅಂಕ‌ ನಡೆಯಬೇಕಾದರೆ ಹಲವು ಷರತ್ತುಗಳನ್ನು ಪಾಲಿಸಲು ಕೋರ್ಟ್ ಆದೇಶ ನೀಡಿದ್ದು, ಸದ್ಯ ಕಾದಾಟದ ಕೋಳಿಗಳಿಗೆ ಭರ್ಜರಿ ಮಾರುಕಟ್ಟೆ ಲಭ್ಯವಾಗಿದೆ.

ನ್ಯಾಯಾಲಯದ ಷರತ್ತಿನ ಪ್ರಕಾರ ಕೋಳಿ ಅಂಕದಲ್ಲಿ ಕಾದಾಟ ನಡೆಸುವ ಕೋಳಿಗಳ ಕಾಲಿಗೆ ಕತ್ತಿಯನ್ನು ಕಟ್ಟುವಂತಿಲ್ಲ, ಜೂಜಾಟ ನಡೆಸುವಂತಿಲ್ಲ ಎನ್ನುವ ಅಂಶಗಳ ಉಲ್ಲೇಖವಿದ್ದರೂ, ಬಹುತೇಕ ಕೋಳಿ ಅಂಕಗಳಲ್ಲಿ ಇವೆರಡು ಇಲ್ಲದೆ ಕೋಳಿ ಅಂಕಗಳು ನಡೆಯುವುದೇ ಇಲ್ಲ. ಹೆಚ್ಚಾಗಿ ದೈವ ಸ್ಥಾನಗಳ ಜಾತ್ರೆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕೋಳಿ ಅಂಕಗಳು ಆರಂಭವಾಗುತ್ತಿದ್ದು, ಹಿಂದೆ ಕೃಷಿಕರು ಮನರಂಜನಾ ಕ್ರೀಡೆಯಾಗಿ ಕೋಳಿ ಅಂಕವನ್ನು ನೋಡುತ್ತಿದ್ದರು.

ಆದರೆ ಕಾಲ ಕ್ರಮೇಣ ಕೋಳಿ ಅಂಕಕ್ಕೂ ಜೂಜಿನ ಅಮಲು ಅಂಟಿಕೊಂಡ ಬಳಿಕ ಕೋಳಿ ಅಂಕ ಜನಾಕರ್ಷಣೆಯ ಪ್ರಮುಖ ಕ್ರೀಡೆಯಾಗಿಯೂ ಬದಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಕಡೆಗಳಲ್ಲಿ ದೈವಾರಾಧನೆ ಇರುವ ಕಡೆಗಳಲ್ಲಿ ಸ್ಥಳಿಯ ಆಡಳಿತವು ಈ ಕೋಳಿ ಅಂಕಕ್ಕೆ ಅನುಮತಿಯನ್ನೂ ನೀಡುತ್ತಿದ್ದು, ಉಳಿದ ಕಡೆಗಳಲ್ಲಿ ಇದಕ್ಕೆ ಅವಕಾಶವಿರಲಿಲ್ಲ.

ನ್ಯಾಯಾಲಯದ ತೀರ್ಪಿನ ಬಳಿಕ ಕೋಳಿ ಅಂಕಗಳು ಪ್ರತಿದಿನ ಒಂದಲ್ಲ ಒಂದು ಕಡೆಗಳಲ್ಲಿ ನಡೆಯುತ್ತಿದ್ದು, ಇದನ್ನೇ ಒಂದು ಕಸುಬಾಗಿ ಆಯ್ದುಕೊಂಡವರೂ ನೂರಾರು ಜನರಿದ್ದಾರೆ. ನ್ಯಾಯಾಲಯ ಷರತ್ತುಬದ್ಧ ಆದೇಶದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಕೋಳಿ ಅಂಕದ ಅಭಿಮಾನಿ ವಾಮದಪದವಿನ ಇಮ್ಮಿ ಶೆಟ್ಟಿ, ಕೋಳಿ ಅಂಕಕ್ಕಾಗಿ ಮನೆಯಲ್ಲಿ ಹಲವು ಹುಂಜಗಳಿದ್ದರೂ, ಅಂಕಗಳು ಕಡಿಮೆಯಾಗುತ್ತಿದ್ದರಿಂದ ನಿರಾಸೆಯಾಗುತಿತ್ತು. ಆದರೆ ಈಗ ಷರತ್ತುಬದ್ಧ ಅನುಮತಿ‌ ಸಿಕ್ಕಿದೆ.

- Advertisement -

Related news

error: Content is protected !!