Sunday, May 19, 2024
spot_imgspot_img
spot_imgspot_img

ತೂಕ ಇಳಿಸುವಲ್ಲಿ ಅವಲಕ್ಕಿ ಸಹಕಾರಿ

- Advertisement -G L Acharya panikkar
- Advertisement -

ಅವಲಕ್ಕಿ ಅತ್ಯಂತ ಪೌಷ್ಟಿಕ ಆಹಾರವಾಗಿದೆ. ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಗಿನ ಉಪಹಾರವಾಗಿ ಅವಲಕ್ಕಿಯಿಂದ ತಯಾರಿಸಿದ ಆಹಾರಗಳನ್ನು ಸೇವಿಸಿ. ಇದು ಆರೋಗ್ಯಕ್ಕೂ ಉತ್ತಮವಾಗಿದೆ. ಅವಲಕ್ಕಿ ಖಾದ್ಯ ತಿನ್ನೋ ಮೂಲಕ ಸುಲಭವಾಗಿ ಹೇಗೆ ಬೊಜ್ಜು ಇಳಿಸಿಕೊಳ್ಳೋದು ಅನ್ನೋದನ್ನು ತಿಳಿದುಕೊಳ್ಳಿ

ಪೌಷ್ಟಿಕತಜ್ಞರು ಅವಲಕ್ಕಿಯನ್ನು ಆರೋಗ್ಯಕರ ಉಪಹಾರಗಳಲ್ಲಿ ಒಂದೆಂದು ಹೇಳ್ತಾರೆ. 100gms ಅವಲಕ್ಕಿ 110kcal ಅನ್ನು ಹೊಂದಿರುತ್ತದೆ. ಇದು 2.87g ಕೊಬ್ಬು, 0.344g ಸ್ಯಾಚುರೇಟೆಡ್ ಕೊಬ್ಬು, 210mg ಸೋಡಿಯಂ, 117mg ಪೊಟ್ಯಾಸಿಯಮ್, 0.9g ಫೈಬರ್, 0.5g ಸಕ್ಕರೆಗಳು ಮತ್ತು 2.3g ಪ್ರೋಟೀನ್ ಹೊಂದಿದೆ. ಇದರಲ್ಲಿರುವ ಒಟ್ಟು ಕಾರ್ಬೋಹೈಡ್ರೇಟ್ ಅಂಶವು 18.8 ಗ್ರಾಂ ಆಗಿದೆ. ಆದ್ದರಿಂದ ಇದು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರ ನೆಚ್ಚಿನ ಆಯ್ಕೆಯಾಗಿದೆ.

ಅವಲಕ್ಕಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಇದು ತೂಕ ನಷ್ಟಕ್ಕೆ ಸೂಕ್ತವಾದ ಆಹಾರವಾಗಿದೆ. ಇದು ಕರುಳಿನ ಆರೋಗ್ಯವನ್ನು ಹತೋಟಿಯಲ್ಲಿಡುತ್ತದೆ ಮತ್ತು ಆಮ್ಲೀಯತೆಯನ್ನು ತಪ್ಪಿಸುತ್ತದೆ. ಹೆಚ್ಚುವರಿ ಕೊಬ್ಬನ್ನು ಕರಗಿಸುವ ಗುರಿಯನ್ನು ಹೊಂದಿರುವವರಿಗೆ ಇದು ಒಂದು ಆರೋಗ್ಯಕರ ಊಟ. ಇದು ಯಾವುದೇ ಕೊಬ್ಬನ್ನು ಸಂಗ್ರಹಿಸದೆ ದೇಹವನ್ನು ಶಕ್ತಿಯುತವಾಗಿರಿಸಲು ಅಗತ್ಯವಾದ ಆರೋಗ್ಯಕರ ಕಾರ್ಬೋಹೈಡ್ರೇಟ್ಗಳನ್ನು ಹೊಂದಿದೆ.

ಅವಲಕ್ಕಿಯಲ್ಲಿ ಫೈಬರ್ ಸಮೃದ್ಧವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆಯನ್ನು ತಡೆಯುತ್ತದೆ. ಮಧುಮೇಹಿಗಳಿಗೆ ಇದನ್ನು ಹೆಚ್ಚು ಶಿಫಾರಸು ಮಾಡಲಾಗಿದೆ. ಏಕೆಂದರೆ ಇದು ಆರೋಗ್ಯಕರ ಕಾರ್ಬೋಹೈಡ್ರೇಟ್ಗಳನ್ನು ಹೊಂದಿದ್ದು ಅದು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿರುತ್ತದೆ.

ಕಬ್ಬಿಣಾಂಶ ಅಧಿಕವಿರೋ ಅವಲಕ್ಕಿ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಅತ್ಯುತ್ತಮವಾದ ಖಾದ್ಯವಾಗಿದೆ. ಇದು ಮಕ್ಕಳು, ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರಿಗೆ ಆರೋಗ್ಯಕರ ಆಯ್ಕೆಯಾಗಿದೆ. ಇದು ದೇಹಕ್ಕೆ ಸಾಕಷ್ಟು ಪ್ರಮಾಣದ ಕಬ್ಬಿಣಾಂಶ ಒದಗಿಸುತ್ತದೆ. ಗರ್ಭಿಣಿಯರು ಗರ್ಭಾವಸ್ಥೆಯ ರಕ್ತಹೀನತೆಯ ಹೆಚ್ಚಿನ ಅಪಾಯವನ್ನು ಹೊಂದಿರುವ ಕಾರಣ ಅವಲಕ್ಕಿ ಸೇವಿಸಲು ಹೇಳಲಾಗುತ್ತದೆ.

ಸುಲಭವಾಗಿ ಜೀರ್ಣವಾಗುವುದರಿಂದ ಅವಲಕ್ಕಿ ಲಘು ಉಪಹಾರವಾಗಿದೆ. ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಭಾಸವಾಗುತ್ತದೆ. ದಿನದ ಆರಂಭದಲ್ಲಿ ಇದು ಆರೋಗ್ಯಕರ ಮತ್ತು ಅತ್ಯಂತ ಸೂಕ್ತವಾದ ಊಟವಾಗಿದೆ.

ಮೆದುಳಿನ ಜೀವಕೋಶಗಳ ರಚನೆ ಮತ್ತು ನಿರ್ವಹಣೆಯಲ್ಲಿ ಅಗತ್ಯವಾದ ವಿಟಮಿನ್ ಬಿ ಯಿಂದ ಸಮೃದ್ಧವಾಗಿರುವುದರಿಂದ ಅವಲಕ್ಕಿ ತಿನ್ನುವುದು ಮೆದುಳನ್ನು ಚುರುಕುಗೊಳಿಸುತ್ತದೆ. ಇದರಲ್ಲಿರುವ ಸಕ್ರಿಯ ಉತ್ಕರ್ಷಣ ನಿರೋಧಕಗಳು ಮೆದುಳನ್ನು ಆಕ್ಸಿಡೇಟಿವ್ ಒತ್ತಡದ ಹಾನಿಯಿಂದ ರಕ್ಷಿಸುತ್ತದೆ. ಏಕಾಗ್ರತೆಯನ್ನು ಸುಧಾರಿಸುತ್ತದೆ ಮತ್ತು ಸ್ಮರಣೆಯನ್ನು ತೀಕ್ಷ್ಣಗೊಳಿಸುತ್ತದೆ.

ರೆಸಿಪಿ: 2 ಕಪ್ ಒಣ ಪೋಹಾವನ್ನು ತೆಗೆದುಕೊಳ್ಳಿ ಅದನ್ನು ಎರಡು ಬಾರಿ ತೊಳೆಯಿರಿ ಮತ್ತು 10 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ನೀರು ಸಂಪೂರ್ಣವಾಗಿ ಬರಿದಾಗಲಿ. ಬಾಣಲೆಯಲ್ಲಿ 2 ಟೇಬಲ್ ಸ್ಪೂನ್ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ. ಸಾಸಿವೆ , ಕಡಲೆಬೇಳೆಯನ್ನು ಹಾಕಿ ಗರಿಗರಿಯಾಗುವವರೆಗೆ ಸ್ವಲ್ಪ ಸಮಯ ಕದಡಿ. ಬಾಣಲೆಯಲ್ಲಿ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಹಸಿರು ಬಟಾಣಿ ಹಾಕಿ. ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ತರಕಾರಿಗಳನ್ನು ಹುರಿಯಿರಿ.

ಉಪ್ಪು, ಕರಿಮೆಣಸು, ಕೆಲವು ಚಿಲ್ಲಿ ಫ್ಲೇಕ್ಸ್ ಮತ್ತು ಅರಿಶಿನ ಸೇರಿಸಿ, ಸ್ವಲ್ಪ ಬೆರೆಸಿ. ಈಗ ತೊಳೆದ ಅವಲಕ್ಕಿಯನ್ನು ಬಾಣಲೆಗೆ ಹಾಕಿ ತರಕಾರಿಗಳಿಗೆ ಮಿಶ್ರಣ ಮಾಡಿ ಮತ್ತು ಎರಡು ನಿಮಿಷಗಳ ಕಾಲ ಚೆನ್ನಾಗಿ ಬೆರೆಸಿ. ನಿಂಬೆ ರಸವನ್ನು ಹಿಂಡಿ ಮತ್ತು ಮತ್ತೆ ಬೆರೆಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಮತ್ತು ಬಡಿಸಿ.

- Advertisement -

Related news

error: Content is protected !!