Thursday, May 2, 2024
spot_imgspot_img
spot_imgspot_img

ಇಂತಹ ಆಹಾರಗಳಿಂದ ದೂರವಿರಿ, ಇಲ್ಲಾಂದ್ರೆ ರೋಗನಿರೋಧಕ ಶಕ್ತಿ ಕಡಿಮೆ ಆಗಬಹುದು!

- Advertisement -G L Acharya panikkar
- Advertisement -

ಈಗ ಚಳಿಗಾಲ ಆಗಿರುವುದರಿಂದ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದೇ ಒಂದು ದೊಡ್ಡ ಸವಾಲು ಎಂದು ಹೇಳ ಬಹುದು. ಮನೆಯಲ್ಲಿ ಪುಟ್ಟ ಮಕ್ಕಳು, ಹಿರಿಯರು, ವಯಸ್ಸಾದವರು ಗರ್ಭಿಣಿಯರು ಇದ್ದರೆ ಚಳಿಗಾಲದ ಸಂದರ್ಭ ದಲ್ಲಿ ಬಹಳ ಹುಷಾರಾಗಿರಬೇಕು. ಯಾಕೆಂದ್ರೆ ಈ ಸಮಯದಲ್ಲಿ ದೇಹದ ರೋಗ ನಿರೋಧಕ ಶಕ್ತಿಯ ಅಥವಾ ಇಮ್ಯೂನಿಟಿ ಪವರ್ ಬಹಳ ಬೇಗನೇ ಕಡಿಮೆ ಆಗಿಬಿಡುತ್ತದೆ.

ಎಲ್ಲಾಕ್ಕಿಂತ ಮುಖ್ಯವಾಗಿ ಕೊರೊನಾದ ಉಪಟಳ ಇನ್ನೊಮ್ಮೆ ಶುರು ವಾಗಿದೆ…ಪಕ್ಕದ ರಾಜ್ಯ ಕೇರಳದಲ್ಲಿ ನಿಧಾನಕ್ಕೆ ಈ ವೈರಸ್ ಸದ್ದು ಮಾಡುತ್ತಿದೆ..ಹೀಗಾಗಿ ಯಾವುದೇ ಸುರಕ್ಷತೆಯ ದೃಷ್ಟಿ ಯಿಂದ ನಮ್ಮ ರೋಗ ನಿರೋಧಕ ಶಕ್ತಿ ಸ್ಟ್ರಾಂಗ್ ಆಗಿದ್ದರೆ ಒಳ್ಳೆಯದು…​

ಮನೆಯಲ್ಲಿ ಮಕ್ಕಳಿಗೆ ಸಕ್ಕರೆ ಬೆರೆಸದ ಹಾಲು ಕೊಟ್ಟರೆ, ಗಲಾಟೆ ಮಾಡಲು ಶುರು ಮಾಡಿಬಿಡುತ್ತಾರೆ. ನಾನು ಕುಡಿಯಲ್ಲ ಎಂದು ಒಂದೇ ಸಮನೆ ಅಳುವುದಕ್ಕೆ ಶುರು ಮಾಡಿಬಿಡುತ್ತಾರೆ!ಅಷ್ಟೇ ಯಾಕೆ ಮನೆಯ ಸದಸ್ಯರಿಗೂ ಕೂಡ ಸಕ್ಕರೆ ಹಾಕದ ಟೀ-ಕಾಫಿ ಕುಡಿಯಿರಿ ಹೇಳಿದರೆ ಮುಖ ಗಂಟು ಹಾಕಿಕೊಳ್ಳುತ್ತಾರೆ!
ಸಕ್ಕರೆ ಹಾಕದೇ ಇರುವ ಟೀ ಕಾಫಿ ಅಥವಾ ಹಾಲು ಕುಡಿಯಲು ಯಾರಿಗೂ ಕೂಡ ಮನಸ್ಸೇ ಬರುವುದಿಲ್ಲ. ಆದರೆ ನಿಮಗೆ ಗೊತ್ತಿಲಿ, ಬೆಳ್ಳಗ್ಗೆ ಕಾಣುವ ಈ ಸಕ್ಕರೆ, ಆರೋಗ್ಯಕ್ಕೆ ತುಂಬಾನೇ ಹಾನಿಕಾರಕ! ವೈದ್ಯರು ಇದೇ ಮಾತನ್ನು ಹೇಳುತ್ತಾರೆ. ಸಕ್ಕರೆ ಹಾಗೂ ಸಕ್ಕರೆ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳು ಹಾಗೂ ಪಾನೀಯ ಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ, ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವುದು ಮಾತ್ರವಲ್ಲ, ದೇಹದ ರೋಗ ನಿರೋಧಕ ಶಕ್ತಿಯೂ ಕೂಡ ಕ್ರಮೇಣವಾಗಿ ಕಡಿಮೆ ಆಗುತ್ತಾ ಬರುತ್ತದೆ. ಯಾಕೆಂದರೆ ಅತಿಯಾದ ಸಕ್ಕರೆಯಾಂಶ, ದೇಹದಲ್ಲಿ ಬಿಳಿ ರಕ್ತ ಕಣಗಳು, ಕೆಲಸಕಾರ್ಯಗಳಿಗೆ ಅಡ್ಡಿಪಡಿಸುತ್ತವೆ, ಇದೇ ಕಾರಣಕ್ಕೆ ದೇಹದಲ್ಲಿ ಇಮ್ಯೂನಿಟಿ ಕೂಡ ಕಡಿಮೆಯಾಗಿ ಬಿಡುತ್ತದೆ.​

ಪ್ರಮುಖವಾಗಿ ಇಂತಹ ಆಹಾರ ಪದಾರ್ಥಗಳಲ್ಲಿ ಅಧಿಕ ಸೋಡಿಯಂ ಅಂಶ ಹಾಗೂ ಅನಾರೋಗ್ಯಕರ ಕೊಬ್ಬಿನ ಅಂಶ ಅಧಿಕ ಪ್ರಮಾಣದಲ್ಲಿ ಕಂಡುಬರುವುದರಿಂದ, ದೇಹದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಯಾಗುವ ಜೊತೆಗೆ ಬಹಳ ಬೇಗನೇ ದೀರ್ಘಕಾಲ ಕಾಡುವ ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ!​

ಚಳಿಗಾಲದಲ್ಲಿ ಎಣ್ಣೆಯಲ್ಲಿ ಕರಿದ ಆಹಾರಗಳು ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಬೇರೆ ಬಗೆಯ ಆಹಾರ ಪದಾರ್ಥಗಳಿಗೆ ಹೋಲಿಸಿದರೆ, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳು ನಮ್ಮ ಆರೋಗ್ಯಕ್ಕೆ ತುಂಬಾ ಡೇಂಜರ್.
ಅದರಲ್ಲೂ ರಸ್ತೆ ಬದಿಯಲ್ಲಿ ಸಿಗುವ ಕರಿದ ಆಹಾರ ಪದಾರ್ಥ ಗಳು ಅಂತೂ, ನಮ್ಮ ಪುಟ್ಟ ಹೃದಯಕ್ಕೆ ತುಂಬಾನೇ ಅಪಾಯ ಕಾರಿ. ಅಷ್ಟೇ ಅಲ್ಲದೆ ಇಂತಹತಿಂಡಿಗಳಲ್ಲಿ ಅತಿಯಾದ ಕ್ಯಾಲೋರಿ ಅಂಶ ಹಾಗೂ ಜಿಡ್ಡಿನಾಂಶವು ಕಂಡು ಬರುವುದರಿಂದ, ಮುಂದಿನ ದಿನಗಳಲ್ಲಿ ಒತ್ತಡ ಹಾಗೂ ಉರಿಯುತದಂತಹ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕೊನೆಗೆ ಇದೇ ಕಾರಣದಿಂದ ದೇಹದ ರೋಗನಿರೋಧಕ ಶಕ್ತಿಯೂ ಕೂಡ, ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ​

- Advertisement -

Related news

error: Content is protected !!