Friday, May 17, 2024
spot_imgspot_img
spot_imgspot_img

ತ್ರಿಪುರಾ ವಿಧಾನಾಸಭಾ ಚುನಾವಣೆ: 259 ಅಭ್ಯರ್ಥಿಗಳು ಕಣದಲ್ಲಿ..! ನಾಯಕರ ಭವಿಷ್ಯ ಮತದಾರರ ಕೈಯಲ್ಲಿ..!

- Advertisement -G L Acharya panikkar
- Advertisement -

ತ್ರಿಪುರಾ ರಾಜ್ಯದಲ್ಲಿ ವಿಧಾನಾಸಭಾ ಚುನಾವಣೆ ಗರಿಗೆದರಿದ್ದು ಇಂದು ಬಿರುಸಿನ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಕಳೆದ ಬಾರಿ ಬಿಜೆಪಿ ಅಧಿಕ ಸ್ಥಾನದಲ್ಲಿ ಗೆದ್ದಿತ್ತು. ಬಿಗಿ ಭದ್ರತೆಯಲ್ಲಿ ಚುನಾವಣೆ ನಡೆಯುತ್ತಿದೆ.

259 ಅಭ್ಯರ್ಥಿಗಳು ಕಣದಲ್ಲಿದ್ದು ಇಂದು ಅವರ ಭವಿಷ್ಯ ನಿರ್ಧರವಾಗಲಿದೆ. ರಾಜ್ಯದ 3,337 ಮತಗಟ್ಟೆಗಳಲ್ಲಿ ಒಟ್ಟು 28.13 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈವರೆಗೆ ತ್ರಿಪುರಾದಲ್ಲಿ ಯಾವುದೇ ಅಹಿತಕರ ಘಟನೆ ಅಥವಾ ಇವಿಎಂ ತಾಂತ್ರಿಕ ದೋಷಗಳು ವರದಿಯಾಗಿಲ್ಲ.

ಬಿಜೆಪಿ ಆಡಳಿತವಿರುವ ತ್ರಿಪುರಾದಲ್ಲಿ 60 ವಿಧಾನಸಭಾ ಸ್ಥಾನಗಳಿದ್ದು, ಅದರಲ್ಲಿ 20 ಎಸ್‌ಟಿ ಮತ್ತು 10 ಎಸ್‌ಸಿ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (ITFT) ಜೊತೆ ಮೈತ್ರಿ ಮುಂದುವರಿಸಿರುವ ಬಿಜೆಪಿ 55 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಹಾಗೂ ಐಟಿಎಫ್ ಟಿ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ೪೨ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಎಡ ಪಕ್ಷಗಳಾದ ಸಿಪಿಐ, ಫಾರ್ವರ್ಡ್ ಬ್ಲಾಕ್, ಸಿಪಿಐ(ಎಂ) ಮತ್ತಿತ್ತರ ಪಕ್ಷಗಳೊಂದಿಗೆ ತ್ರಿಕೋನ ಪ್ರಬಲ ಸ್ಫರ್ಧೆ ಏರ್ಪಟ್ಟಿದೆ.

2018ರ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು ಮತ್ತು “ಚಲೋ ಪಲ್ಟೈ” (ಬದಲಾವಣೆ ಮಾಡೋಣ) ಎಂಬ ಘೋಷಣೆಯ ಮೇಲೆ 25 ವರ್ಷಗಳ ಎಡಪಕ್ಷದ ಆಡಳಿತವನ್ನು ಕೊನೆಗೊಳಿಸಿತ್ತು.

- Advertisement -

Related news

error: Content is protected !!