Sunday, July 6, 2025
spot_imgspot_img
spot_imgspot_img

ದಾರುಲ್ ಅಶ್ಅರಿಯದಲ್ಲಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿಗೆ ಸನ್ಮಾನ

- Advertisement -
- Advertisement -
vtv vitla
vtv vitla

ವಿಟ್ಲ: ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೌಲಾನಾ ಎನ್.ಕೆ.ಎಂ ಶಾಫಿ ಸಅದಿ ಬೆಂಗಳೂರು ಅವರನ್ನು ಸುರಿಬೈಲು ದಾರುಲ್ ಅಶ್ಅರಿಯ ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಶೈಖುನಾ ವಾಲೆಮಂಡೋವ್ ಉಸ್ತಾದರ ಅಧ್ಯಕ್ಷತೆಯಲ್ಲಿ ಸುರಿಬೈಲು ಉಸ್ತಾದರ ಮಖಾಂ ಝಿಯಾರತ್ ನೊಂದಿಗೆ ಚಾಲನೆಗೊಂಡ ಕಾರ್ಯಕ್ರಮದಲ್ಲಿ ದಾರುಲ್ ಅಶ್ಅರಿಯ ಜನರಲ್ ಮ್ಯಾನೇಜರ್ ಸಿ.ಎಚ್ ಮುಹಮ್ಮದ್ ಅಲಿ ಸಖಾಫಿ ಅಭಿನಂದನಾ ಭಾಷಣ ನಡೆಸಿದರು.

vtv vitla
vtv vitla

ಸನ್ಮಾನ ಸ್ವೀಕರಿಸಿದ ಮೌಲಾನಾ ಶಾಫಿ ಸಅದಿ ಅವರು ಮಾತನಾಡಿ ನಾನು ಅತಿಥಿಯಾಗಿ ಇಲ್ಲಿಗೆ ಆಗಮಿಸಲಿಲ್ಲ ನನ್ನ ಇಬ್ಬರು ಮಕ್ಕಳು ಈ ಸಂಸ್ಥೆಯಲ್ಲಿ ಕಲಿಯುತ್ತಿದ್ದು ನಾನು ಈ ಸಂಸ್ಥೆಯ ಪೋಷಕರಲ್ಲಿ ಒಬ್ಬನಾಗಿದ್ದೇನೆ. ಈ ಸಂಸ್ಥೆಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ದೊರಕುವ ಗರಿಷ್ಟ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದರು.

ಸಯ್ಯಿದ್ ಮದಕ ತಂಙಳ್, ಬೊಳ್ಮಾರ್ ಉಸ್ತಾದ್, ಮಂಚಿ ಉಸ್ತಾದ್, ಸೇರಾಜೆ ಉಸ್ತಾದ್, ಮುಹಮ್ಮದ್ ಮದನಿ ಸಾಮಣಿಗೆ, ರಝ್ಝಾಕ್ ಸಖಾಫಿ ಬೊಳ್ಳಾಯಿ, ಅಬ್ದುಲ್ಲಾ ಮುಸ್ಲಿಯಾರ್ ದುಬಾಯಿ, ಇಬ್ರಾಹಿಂ ಸಖಾಫಿ ದಾವಣಿಗೆರೆ, ಇಬ್ರಾಹಿಂ ಸಖಾಫಿ ಸೆರ್ಕಳ, ಅಕ್ಬರ್ ಅಲಿ ಮದನಿ ಆಲಂಪಾಡಿ, ಸುಲೈಮಾನ್ ಹಾಜಿ ಸಿಂಗಾರಿ, ಇರಾ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಅಬೂಬಕ್ಕರ್ ಸೆರ್ಕಳ, ಮೊದಲಾದವರು ಉಪಸ್ಥಿತರಿದ್ದರು.

ಸುನ್ನಿ ಫೈಝಿ ಉಸ್ತಾದ್ ಸ್ವಾಗತಿಸಿ, ವಂದಿಸಿದರು.

vtv vitla
vtv vitla
vtv vitla
vtv vitla
- Advertisement -

Related news

error: Content is protected !!