Friday, May 17, 2024
spot_imgspot_img
spot_imgspot_img

ದಾಳಿಂಬೆ ಹಣ್ಣಿನಿಂದಾಗುವ ಪ್ರಯೋಜನಗಳೇನು ಗೊತ್ತಾ?ಇಲ್ಲಿವೆ ನೋಡಿ.

- Advertisement -G L Acharya panikkar
- Advertisement -

ದಾಳಿಂಬೆ ಹಣ್ಣು ಆಂಟಿ ಆಕ್ಸಿಡೆಂಟ್, ಅಂಟಿ ವೈರಲ್ ಮತ್ತು ಆಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಮತ್ತು ಫೋಲಿಕ್ ಆಮ್ಲ ಕೂಡ ಇದೆ. ಪ್ರತಿನಿತ್ಯ ದಾಳಿಂಬೆಯನ್ನು ತಿನ್ನುವುದು ಅಥವಾ ಜ್ಯೂಸ್ ಕುಡಿಯುವುದು ನಿಮ್ಮ ರೋಗ ನಿರೋಧಕ ಶಕ್ತಿಗೆ ಅತ್ಯುತ್ತಮವಾಗಿ ಸಹಾಯ ಮಾಡುತ್ತದೆ. ಮಧುಮೇಹ, ರಕ್ತದೊತ್ತಡವನ್ನು ಸುಧಾರಿಸುವುದರ ಜೊತೆ ಜೊತೆಗೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

*ದಾಳಿಂಬೆಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ನಿಮ್ಮ ರಕ್ತವನ್ನು ತೆಳುವಾಗುವಂತೆ ಕಾರ್ಯ ನಿರ್ವಹಿಸುತ್ತವೆ.

*ದಾಳಿಂಬೆ ಬೀಜಗಳು ನಿಮ್ಮ ರಕ್ತದ ಪ್ಲೇಟ್‌ಲೆಟ್‌ಗಳು ಹೆಪ್ಪು ಗಟ್ಟುವುದನ್ನು ತಡೆಯುತ್ತದೆ.

*ಅಲ್ಲದೆ, ದಾಳಿಂಬೆಯ ಸೇವನೆಯಿಂದ ಗಾಯವನ್ನು ಗುಣಪಡಿಸುತ್ತದೆ.

*ಹೃದಯ, ಅಪಧಮನಿಗಳು ಅಥವಾ ಆಂತರಿಕ ಹೆಪ್ಪುಗಟ್ಟುವಿಕೆಯಿಂದ ಕಾಪಾಡುತ್ತದೆ.
*ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಅಸ್ಥಿ ಸಂಧಿವಾತದಂತಹ ರೋಗ ನಿರೋಧಕ ಸಂಬಂಧಿತ ಅಸ್ವಸ್ಥತೆಗಳಿಂದ ಬಳಲುತ್ತಿರುವವರು ದಾಳಿಂಬೆಯ ಸೇವನೆ ಮಾಡುವುದು ಒಳ್ಳೆಯದು.

*ಒಂದು ಅಧ್ಯಯನದ ಪ್ರಕಾರ, ನಿಮ್ಮ ಸ್ಮರಣಾ ಶಕ್ತಿಯನ್ನು ಹೆಚ್ಚಿಸಲು ದಾಳಿಂಬೆ ನೆರವಾಗುತ್ತದೆ.

*ಹಾಗಾಗಿ ಪ್ರತಿನಿತ್ಯ ನಿಮ್ಮ ಮಕ್ಕಳಿಗೆ ದಾಳಿಂಬೆಯನ್ನು ಸೇವಿಸುವುದು ಒಳ್ಳೆಯದು.

*ಗರ್ಭಿಣಿಯರು ಗರ್ಭಾವಸ್ಥೆಯಲ್ಲಿದ್ದಾಗ ಯಾವುದೇ ಕಾರಣಕ್ಕೂ ಕೆಲವು ಹಣ್ಣುಗಳನ್ನು ಸೇವನೆ ಮಾಡುವುಂತಿಲ್ಲ.

*ದಾಳಿಂಬೆ, ಸೇಬು, ಸ್ಟ್ರಾಬೆರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಮಗುವು ಆರೋಗ್ಯಕರವಾಗಿ ಬೆಳೆಯುತ್ತದೆ.

*ದಾಳಿಂಬೆಯಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿದೆ. ಇದು ಕಬ್ಬಿಣ ಅಂಶದ ಕೊರತೆಯನ್ನು ತಡೆಯಲು ಸಹಾಯ ಮಾಡುತ್ತದೆ.

- Advertisement -

Related news

error: Content is protected !!