Sunday, April 28, 2024
spot_imgspot_img
spot_imgspot_img

ಸುಳ್ಯ: ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ; ಮರುಕಳಿಸುತ್ತಾ ಮತ್ತೊಂದು ದುರಂತ..!?

- Advertisement -G L Acharya panikkar
- Advertisement -

ಸುಳ್ಯ: ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದಲ್ಲಿ ಇಂದು ಭೂ ಕಂಪನದ ಅನುಭವವಾಗಿದ. ಬೆಳಗೆ ಸುಮಾರು 9-15 ರ ವೇಳೆಗೆ ಇದ್ದಕ್ಕಿದ್ಯಂತೆ ಸುಮಾರು 4-5 ಸೆಕಂಡ್ ಗಳ ಲಘು ಭೂಕಂಪನ ಸಂಭವಿಸಿದೆ.

ಮಡಿಕೇರಿ ತಾಲೂಕಿನ ಚೆಂಬು ಗ್ರಾಮ, ಸುಳ್ಯ ತಾಲೂಕಿನ ಕಲ್ಲುಗುಂಡಿ, ಗೂನಡ್ಕ, ಕರಿಕೆ, ಮರ್ಕಂಜ, ಪೆರಾಜೆ, ಗೂನಡ್ಕ, ಕಲ್ಲುಗುಂಡಿ, ಆರಂತೋಡು,ಐವರ್ನಾಡು, ಆಲೆಟ್ಟಿ, ತೊಡಿಕಾನ, ದಲ್ಲಿ ಭಾರೀ ಶಬ್ದದೊಂದಿಗೆ 4 ರಿಂದ 5 ಸೆಕಂಡ್ ಗಳ ಕಾಲ ಭೂಮಿ ಕಂಪಿಸಿದೆ. ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದ್ದರಿಂದ ಜನ ಆತಂಕಗೊಂಡಿದ್ದಾರ. ಕೆಲವೆಡೆ ಅಡುಗೆ ಕೋಣೆಯಲ್ಲಿದ್ದ ಪಾತ್ರಗಳು ಉರುಳಿವೆ.

ಮರುಕಳಿಸುತ್ತಾ ಭೀಕರ ಗುಡ್ಡಕುಸಿತ..?! ಆತಂಕದಲ್ಲಿ ಜನತೆ
೨೦೧೮ರಲ್ಲಿ ಸುರಿದ ಭೀಕರ ಮಳೆ, ಹಾಗೂ ಪ್ರಕೃತಿ ದುರಂತದಿಂದ ಜನರು ಕಂಗೆಟ್ಟು ಹೋಗಿದ್ದರು. ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿನಾಡಿನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತ ಹಾಗೂ ಎಡೆಬಿಡದೆ ಸುರಿದ ಮಳೆಯಿಂದ ಅಪಾರ ಪ್ರಾಣಹಾನಿ ಸಂಭವಿಸಿತ್ತು. ಅವತ್ತು ಸಹ ಇಂತಹದ್ದೇ ಸದ್ದು ಜನರಿಗೆ ಕೇಳಿಸಿತ್ತು. ಭೂಮಿಯ ಆಳದಲ್ಲಿ ಸದ್ದು ಕೇಳಿಸಿತ್ತು. ಈಗ ಮತ್ತದೇ ರೀತಿಯಲ್ಲಿ ಭೂಮಿ ಕಂಪಿಸಿದೆ. ಇದರಿಂದ ಜನರಿಗೆ ಆತಂಕ ಮೂಡಿದೆ.

- Advertisement -

Related news

error: Content is protected !!